ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ 5 ತಿಂಗಳ ಯಕ್ಷಗಾನ ತರಬೇತಿ ►ಪರಿಶಿಷ್ಟ ವರ್ಗದ ಪ್ರತಿಭಾವಂತ ಯುವಕ ಯುವತಿಯರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಕಡಬ, ಜ.23. ಕರ್ನಾಟಕ ಯಕ್ಷಗಾನ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ವರ್ಗದ ಪ್ರತಿಭಾವಂತ ಯುವಕ/ಯುವತಿಯರಿಗೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಪ್ರತಿಭಾವಂತ ಯುವಕ/ಯುವತಿಯರಿಗೆ 2018-19ನೇ ಸಾಲಿನಲ್ಲಿ 5 ತಿಂಗಳ ಯಕ್ಷಗಾನ ತರಬೇತಿ ಶಿಬಿರಗಳನ್ನು ನಡೆಸಲು ಹಾಗೂ ಪರಿಕರಗಳೊಂದಿಗೆ ಪ್ರದರ್ಶನ ನೀಡಲು ಉದ್ದೇಶಿಸಿದೆ.

ಯಕ್ಷಗಾನ ಕಲಾಪ್ರಕಾರಗಳಲ್ಲಿ (ತೆಂಕುತಿಟ್ಟು/ಬಡಗುತಿಟ್ಟು ಯಕ್ಷಗಾನ, ಬಡಾಬಡಗುತಿಟ್ಟು ಯಕ್ಷಗಾನ, ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದ ಕೋರೆ, ಯಕ್ಷಗಾನ ಗೊಂಬೆಯಾಟ, ತಾಳಮದ್ದಳೆ)ತರಬೇತಿ ನೀಡ ಬಯಸುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರತಿಭಾವಂತ ಯುವಕ/ಯುವತಿಯರಿಂದ ಆಹ್ವಾನಿಸಿದೆ.ಅರ್ಜಿ ನಮೂನೆ ಪ್ರತಿಯನ್ನು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಅಕಾಡೆಮಿ ಕಚೇರಿಗೆ ಕಳುಹಿಸಬಹುದು.

Also Read  ಕಡಬ: ರಿಕ್ಷಾ ಚಾಲಕನಿಗೆ ಇರಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ► ಪೂರ್ವ ದ್ವೇಷ ತೀರಿಸಿದರೇ ಆರೋಪಿಗಳು...?

ತರಬೇತಿ ನೀಡಬಯಸುವ ಆಸಕ್ತ ಕಲಾವಿದರುಗಳು ಅರ್ಜಿಯನ್ನು ಭರ್ತಿ ಮಾಡಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ. ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560002. ಇಲ್ಲಿಗೆ ಕಳುಹಿಸಿಕೊಡಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 31.ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದು.(ಕಚೇರಿ ದೂರವಾಣಿ: 080-22113146) ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು, ರಾಜೇಶ್.ಜಿ ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬ: ನಾಳೆ(ಜ.21) ಸಿಟಿ ಮೆಡಿಕಲ್ಸ್ ಶುಭಾರಂಭ

error: Content is protected !!
Scroll to Top