(ನ್ಯೂಸ್ ಕಡಬ) newskadaba.com ಕಡಬ, ಜ.23.ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ವತಿಯಿಂದ ಬೆಳ್ತಂಗಡಿಯ ಕರಾಯ ಗ್ರಾಮದ ಶ್ರೀ ಸುಲೈಮಾನ್ ಅವರಿಗೆ ದಿನಾಂಕ 20/01/2019ರ ಭಾನುವಾರದಂದು ಮಂಗಳೂರಿನಲ್ಲಿ ಗಾಲಿ ಕುರ್ಚಿ ನೀಡಲಾಯಿತು. ಶ್ರೀ ಸುಲೈಮಾನ್ ಅವರು ಕಳೆದ ಐದು ವರ್ಷಗಳಿಂದ ನಡೆಯಲಾಗದ ಸ್ಥಿತಿಯಲ್ಲಿದ್ದು ತನ್ನ ದೈನಂದಿನ ಕಾರ್ಯಗಳಿಗೆ ಇತರರನ್ನು ಅವಲಂಬಿಸುತ್ತಿದ್ದಾರೆ. ಶ್ರಿಯುತರು ಬೆಳ್ತಂಗಡಿ ತಾಲೂಕಿನ ಕಾರಾಯ ಗ್ರಾಮದ ಕುಪ್ಪೆಟ್ಟು ಎಂಬಲ್ಲಿ ವಾಸವಾಗಿರುತ್ತಾರೆ.

ಚೂಂತಾರು ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮುರಲೀ ಮೋಹನ್ ಚೂಂತಾರು ಇವರು ಗಾಲಿ ಕುರ್ಚಿಯನ್ನು ಸುಲೈಮಾನ್ ಅವರ ಸಂಬಂಧಿಕರಿಗೆ ಹಸ್ತಾಂತರಿಸಿದರು. ಆಶ್ರಯ, ಆಸರೆ ಮತ್ತು ಆರೋಗ್ಯ ಎಂಬ ಧ್ಯೇಯಗಳನ್ನು ಇಟ್ಟುಕೊಂಡು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ(ರಿ) ಮಂಗಳೂರು ಕಾರ್ಯ ನಿರ್ವಹಿಸುತ್ತಿದೆ. ಇದೇ ಸಂದರ್ಭದಲ್ಲಿ ಚೂಂತಾರು ಪ್ರತಿಷ್ಠಾನದ ಶ್ರೀ ಗಣೇಶ್, ಸುಂದರ್, ಭಾರತಿ ಕಾಲೇಜಿನ ಶ್ರೀ ಕೃಷ್ಣ ನೀರಮೂಲೆ, ನಿಟ್ಟೆ ವಿಶ್ವ ವಿದ್ಯಾಲಯದ ಶ್ರೀ ವೆಂಕಟರಮಣ, ಮಂಗಳೂರಿನ ಖ್ಯಾತ ವೈದ್ಯರಾದ ಡಾ| ಈಶ್ವರ ಪಳ್ಳಾದೆ ಮುಂತಾದವರು ಉಪಸ್ಥಿತರಿದ್ದರು. ಸುಲೈಮಾನ್ ಅವರ ಸೊಸೆ ಜೊಹ್ರಾ ಇವರು ಗಾಲಿ ಕುರ್ಚಿಯನ್ನು ಡಾ| ಮುರಲೀ ಮೋಹನ್ ಚೂಂತಾರು ಇವರಿಂದ ಪಡೆದುಕೊಂಡರು.