ಕಡಬ: ತ್ಯಾಜ್ಯ ಸಾಗಾಟಕ್ಕೆ ಟೆಂಪೊ ವಾಹನ ಒದಗಿಸುವಂತೆ, ಪ್ರವಾಸಿ ಮಂದಿರ ದುರಸ್ತಿಗಾಗಿ► ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜ.23. ಕಡಬ ಗ್ರಾ.ಪಂ. ಗೆ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಆರ್. ಜ.16ರಂದು ಬೇಟಿ ನೀಡಿ ಪಂಚಾಯತ್ ಅಭಿವೃದ್ಧಿ ಬಗ್ಗೆ ಕಡತಗಳನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಕಡಬ ಗ್ರಾ.ಪಂ. ಘನತ್ಯಾಜ್ಯ ವ್ಯವಸ್ಥೆಗೆ ಇದ್ದಂತಹ ಸಣ್ಣ ವಾಹನ ನಾದುರಸ್ತಿಯಲ್ಲಿದ್ದು ಅಲ್ಲದೆ ಅದು ಸಣ್ಣದಾದ ಅಟೋ ಆಪೆ ವಾಹನವಾಗಿದ್ದು ಕಡಬ ಪೇಟೆಯ ತ್ಯಾಜ್ಯ ಸಾಗಿಸಲು ತೊಂದರೆಯಾಗಿದ್ದು ಇಲ್ಲಿಗೆ ಒಂದು ಟೆಂಪೋ (407) ವಾಹನ ಒದಗಿಸುವಂತೆ ಕೇಳಿಕೊಂಡರು.

ಕಡಬ ಪೇಟೆಯಿಂದ ಕೋಡಿಂಬಾಳ ಬೊಳ್ಳೂರು ಘನತ್ಯಾಜ್ಯ ಘಟಕಕ್ಕೆ ಆರುವರೆ ಕಿ.ಮೀ. ದೂರವಿದ್ದು ಈ ಚಿಕ್ಕ ಆಪೆಯಲ್ಲಿ 4, 5 ಬಾರಿ ಸಾಗಿಸಬೇಕಾಗಿದ್ದು ದೊಡ್ಡ ವಾಹನದಲ್ಲಿ ದಿನಕ್ಕೆ ಒಂದೇ ಬಾರಿ ಸಾಗಿಸಿದರೆ ತುಂಬಾ ಅನುಕೂಲವಾಗುವುದಲ್ಲದೆ, ಕೂಲಿ ಕೂಡಾ ಕಡಿಮೆಯಾಗುತ್ತದೆ ಎಂದರು. ಕಡಬ ಗ್ರಾ.ಪಂ. ಅಧ್ಯಕ್ಷ ಮಾತನಾಡಿ, ಈಗೀನ ವ್ಯವಸ್ಥೆಯಲ್ಲಿ ಗ್ರಾ.ಪಂ. ಗೆ ಬಾರಿ ಹೊರೆಯಾಗುತ್ತಿದ್ದು, ತಾವು ಆದಷ್ಟು ಬೇಗ ಇಲ್ಲಿಗೆ ಒಂದು ಟೆಂಪೊ ವ್ಯವಸ್ಥೆ ಮಾಡಬೇಕಾಗಿದೆ ಎಂದು ಆಗ್ರಹಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ರವರು ಕೂಡಲೇ ವ್ಯವಸ್ಥೆ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.

Also Read  ವ್ಯಕ್ತಿ ಕಾಣೆಯಾಗಿದ್ದಾರೆ

ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಎಲ್ಲಾ ಕಚೇರಿಗಳು ಕಾರ್ಯರಂಭಗೊಳ್ಳುತ್ತಿದ್ದು ಈಗಾಗಲೇ ತಾ.ಪಂ. ಅಧೀನದಲ್ಲಿರುವ 7 ಕಟ್ಟಡಗಳು ಹಾಗೂ ನಾದುರಸ್ತಿಯಲ್ಲಿರುವ ಇಲ್ಲಿಯ ಪ್ರವಾಸಿ ಮಂದಿರ ದುರಸ್ತಿಗೊಳಿಸಲು ಅನುದಾನ ಒದಗಿಸುವಂತೆ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ವಿನಂತಿಸಿಕೊಂಡರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ ಸಿ.ಎಸ್. ರವರನ್ನು ಬರಮಾಡಿಕೊಂಡರು. ಉತ್ತರಿಸಿದ ಸಿ.ಎಸ್. ರವರು ರೂ. 20 ಲಕ್ಷ ಅನುದಾನ ಇದೆ ಅದರಲ್ಲಿ ದುರಸ್ತಿಗೆ ಆದ್ಯತೆ ನೀಡಲಾಗುವುದು ಎಂದರು. ಗ್ರಾ.ಪಂ. ಸದಸ್ಯರಾದ ಹನೀಪು ಕೆ.ಎಂ., ಶೆರೀಪ್ ಎ.ಎಸ್., ಕೃಷ್ಣಪ್ಪ ನಾಯ್ಕ, ಸರೋಜಿನಿ ಎಸ್. ಆಚಾರ್, ರೇವತಿ, ನೇತ್ರಾ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಲ್ಲಿ ನೂಜಿಬಾಳ್ತಿಲ ಹಾಗೂ ಬಿಳಿನೆಲೆ ಗ್ರಾಮಗಳಿಗೆ ತಲಾ 75 ಲಕ್ಷ ಅನುದಾನ ಮಂಜೂರಾಗಿದ್ದು ಕೆ.ಆರ್.ಡಿ.ಸಿ.ಎಲ್. ನವರು ಗುತ್ತಿಗೆ ಪಡೆದಿದ್ದು, ಕಳೆದ 2 ವರ್ಷಗಳಿಂದ ಕಾಮಗಾರಿ ಪೂರ್ತಿಗೊಳಿಸದೇ ಕೆಲವು ಕಡೆಗಳಲ್ಲಿ ಕಾಮಗಾರಿ ಇನ್ನೂ ಪ್ರಾರಂಭಿಸದೇ ಬೇಜವಬ್ದಾರಿಯಿಂದ ಅಭಿವೃದ್ಧಿಯಲ್ಲಿ ನಿರ್ಲಕ್ಷವಹಿಸಿ ದೇವರೂ ಕೊಟ್ಟರೂ ಪೂಜಾರಿ ಬಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ನಾವು ನೂಜಿಬಾಳ್ತಿಲ ಹಾಗೂ ಬಿಳಿನೆಲೆ ಗ್ರಾಮ ಪಂಚಾಯತ್‍ನಿಂದ ಅವರ ಹಿಂದೆ ದಂಬಾಳು ಬಿದ್ದು ಸುಸ್ತಾಗಿದ್ದೇವೆ, ಈ ಬಗ್ಗೆ ತಾವು ತುರ್ತು ಕ್ರಮ ಕೈಗೊಂಡು ಕೂಡಲೇ ಕಾಮಗಾರಿ ಪೂರ್ತಿಗೊಳಿಸುವಂತೆ ಆದೇಶಿಸಬೇಕಾಗಿ ಆಗ್ರಹಿಸಿದ ಪಿ.ಪಿ.ವರ್ಗೀಸ್ ನಮ್ಮ ಪೋನ್ ಕರೆಗೂ ಸ್ಪಂದಿಸದೆ, ಸ್ಥಳಕ್ಕೂ ಬಾರದೇ ಸಂಪೂರ್ಣ ಸತಾಯಿಸುತ್ತಿದ್ದಾರೆ ಎಂದು ದೂರಿದರು. ಈ ಬಗ್ಗೆ ಸಂಬಂಧಪಟ್ಟ ಕೆ.ಆರ್.ಡಿ.ಸಿ.ಎಲ್. ನವರಿಗೆ ಸೂಚಿಲಾಗುವುದು ಎಂದು ಸೆಲ್ವಮಣಿ ಉತ್ತರಿಸಿದರು.

Also Read  ಕೊಕ್ಕಡ: ರಾ. ಹೆದ್ದಾರಿಯಲ್ಲಿ ಆನೆಗಳ ಹಿಂಡು ಸಂಚಾರ! ಸ್ಥಳೀಯರಿಗೆ ಆತಂಕ

error: Content is protected !!
Scroll to Top