(ನ್ಯೂಸ್ ಕಡಬ) newskadaba.com ಕಡಬ, ಜ.23. ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದರ್ಶನಬಲಿ ಉತ್ಸವ ನಡೆಯಿತು.
ಬೆಳಿಗ್ಗೆ ನಂದಾದೀಪೋತ್ಸವ, ಬಳಿಕ ಉತ್ಸವ ಆರಂಭಗೊಂಡು ಮಧ್ಯಾಹ್ನ ದೇವರ ದರ್ಶನ ಬಲಿ, ನಂತರ ಬಟ್ಟಲು ಕಾಣಿಕೆ ನಡೆಯಿತು.
ಸಂಜೆ ಬಲಿ ಹೊರಟು ದಂಡತೀರ್ಥ ಕೆರೆ ಉತ್ಸವ, ದೇವರ ಗುಡ್ಡೆ, ತಾವೂರು ದಾರಿಯ ಕಟ್ಟೆಪೂಜೆಗಳು ನಡೆದು ರಾತ್ರಿ ಶ್ರೀರಾಮ ಸಂದರ್ಶನೋತ್ಸವ ನಡೆಯಿತು. ಬಳಿಕ ಶಾಲಾ ಕಾಲೇಜು ಬಳಿಯ ಕಟ್ಟೆಪೂಜೆಗಳು, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆ ಉತ್ಸವ, ಮಹಾಪೂಜೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರುಗಳಾದ ಅನಂತಉಡುಪ, ರವಿಕೆದಿಲಾಯ ಬೆದ್ರುಮಾರು, ತೇಜಕುಮಾರ್ ರೈ ವಳೆಂಜ, ಹೊನ್ನಪ್ಪ ಗೌಡ ಬಾಂತೊಟ್ಟು, ನಾಗಪ್ಪ ಗೌಡ ಖಂಡಿಗ, ಅಂಗಾರ ಅಮೈ, ರೇವತಿ ಹಲ್ಯಾರ, ಆಶಾಲತಾ ಕಲ್ಲೇರಿ, ಉತ್ಸವ ಸಮಿತಿ ಗೌರವಾಧ್ಯಕ್ಷ ಮಾಧವ ಆಚಾರ್ಯ ಇಜ್ಜಾವು, ಅಧ್ಯಕ್ಷ ಕೃಷ್ಣಮೂರ್ತಿ ಕಲ್ಲೇರಿ, ಶ್ರೀ ರಾಮಕುಂಜೇಶ್ವರ ಟ್ರಸ್ಟ್‍ನ ಅಧ್ಯಕ್ಷ ದಿವಾಕರ ರಾವ್ ಪಂಚವಟಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು ಪಾಲ್ಗೊಂಡಿದ್ದರು.