ಬೆಳ್ತಂಗಡಿ:ಚಿನ್ನದ ನಕ್ಲೇಸ್ ಇದ್ದ ವ್ಯಾನಿಟಿ ಬ್ಯಾಗ್ ಎಗರಿಸಿದ ಕಳ್ಳರು ►ಸಿಸಿ ಕ್ಯಾಮರಾದಿಂದ ಇಬ್ಬರನ್ನು ಬಂಧಿಸಿದ ಪೋಲಿಸರು

 (ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜ.19. ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮಧ ರವರು ಅಮರ್‌ಜಾಲ್ ಮನೆ, ಗುರುವಾಯನಕೆರೆ ನಿವಾಸಿಯಾಗಿರುವ   ಶ್ರೀಮತಿ ದಯಾ ರವರು ಅವರ ದಿನಸಿ ಅಂಗಡಿಯಲ್ಲಿದ್ದ ಸಮಯದಲ್ಲಿ  ಮೂವರು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ  ಬಂದರು. ಅದರಲ್ಲಿ ಓರ್ವನು ಕೋಲ್ಡ್‌ ಕೊಡುವಂತೆ ಕೇಳಿದನು. ದಯಾರವರು ಅಪರಿಚಿತ ವ್ಯಕ್ತಿಗೆ  ಕೋಲ್ಡ್‌ ನೀಡಿದರು.

ನಂತರ ಇತರ ಗಿರಾಕಿಗಳಿಗೆ ಸಾಮಾನುಗಳನ್ನು ನೀಡಿದರು.ನಂತರ ಸುಮಾರು 11:20 ಗಂಟೆಗೆ ಅವರ ಗೂಂಪಿನಲ್ಲಿ  ಓರ್ವನು ಬಟಾಟೆ ಹಾಗೂ ಈರುಳ್ಳಿ ನೀಡುವಂತೆ ಕೇಳಿದಾಗ ದಯಾರವರು  ನೀಡಿದರು. ನಂತರ  ಆ ಅಪರಿಚಿತ ವ್ಯಕ್ತಿ  ಪುನಃ ಹೆಚ್ಚುವರಿಯಾಗಿ 5 ಕೆ.ಜಿ. ಈರುಳ್ಳಿ ಕೊಡುವಂತೆ ಕೇಳಿಕೊಂಡರು.ದಯಾರವರು  ತಮಗೆ ಪರಿಚಯದ ಶ್ರೀರಾಜ್‌ರವರಲ್ಲಿ ಈರುಳ್ಳಿ ನೀಡಲು ತೆಗೆಯುತ್ತಿದ್ದಾಗ ಓರ್ವನು ಅಂಗಡಿಯೊಳಗೆ ಹೋಗಿ ಅಂಗಡಿಯೊಳಗಿಟ್ಟಿದ್ದ ದಯಾರವರ   ವ್ಯಾನಿಟಿ ಬ್ಯಾಗನ್ನು ಕಳವು ಮಾಡಿಕೊಂಡು ಓಡುತ್ತಿದ್ದಾಗ ದಯಾರವರು  ಮತ್ತು ಇತರರು ಬೆನ್ನಟ್ಟಿಕೊಂಡು ಹೋದಾಗ ಆರೋಪಿಗಳು  ಅವರ ಕಾರಿನಲ್ಲಿ ಪರಾರಿಯಾದರು.

Also Read  ಹಳೆನೇರೆಂಕಿ ಮೊಸರು ಕುಡಿಕೆ ಉತ್ಸವ

 

ಕಳುವಾದ  ದಯಾರವರ ವ್ಯಾನಿಟಿ ಬ್ಯಾಗಿನಲ್ಲಿ ಹಣ, ಚಿನ್ನದ ನಕ್ಲೇಸ್ ಹಾಗೂ ಮೊಬೈಲ್ ಇತ್ತು.ಈ ಬಗ್ಗೆ   ದಯಾರವರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ  ದೂರು ನೀಡಿದರು. ತಕ್ಷಣವೇ ಚುರುಕಾದ ಪೋಲಿಸರು ಕಳ್ಳರು ಬಳಸಿದ್ದ ಕಾರಿನ ನಂಬರ್​​ಅನ್ನು ಸಿಸಿ ಕ್ಯಾಮರಾದಿಂದ ಪತ್ತೆಹಚ್ಚಿ ಬೆಳ್ತಂಗಡಿಯ ಮೂರು ಮಾರ್ಗದ  ಬಳಿ ಕಾರ್ ಚೇಸ್ ಮಾಡಿ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.ಹಾಸನ ಮೂಲದ ಅಮಾನುಲ್ಲಾ ಖಾನ್​​ ಹಾಗೂ ಮೊಹಮ್ಮದ್​​ ಇಕ್ಬಾಲ್​​ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸ್ ಪೇದೆ ಅಶೋಕ್ ಎಂಬುವರು ಕಳ್ಳರ ಬೆನ್ನೆಟ್ಟಿ ಬಂಧಿಸಿದ್ದಾರೆ. ಬಂಧಿತರ ಕಾರಿನ ಅಡಿಯಲ್ಲಿ ಹಣದ ಬ್ಯಾಗ್​, ದರೋಡೆಗೆ ಉಪಯೋಗಿಸುವ ಕೆಲವೊಂದು ವಸ್ತುಗಳು ಪತ್ತೆಯಾಗಿವೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Also Read  ಐತ್ತೂರು: ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ರೇಡಿಯೋ ವಿತರಣೆ

error: Content is protected !!
Scroll to Top