ಬಿಳಿನೆಲೆ: ಹಾ.ಉ.ಸ.ಸಂಘದ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಸಿ.ಟಿ. ಅವಿರೋಧ ಆಯ್ಕೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.18. ಬಿಳಿನೆಲೆ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಜ. 6ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಅವಿರೋಧವಾಗಿ ನಡೆದಿದೆ.ಸಂಘದ ನೂತನ ಅಧ್ಯಕ್ಷರಾಗಿ ಸಾಮಾನ್ಯ ಸ್ಥಾನದ ಪ್ರದೀಪ್ ಕುಮಾರ್ ಸಿ.ಟಿ., ಉಪಾಧ್ಯಕ್ಷರಾಗಿ ಪರಿಶಿಷ್ಠ ಪಂಗಡ ಸ್ಥಾನದ ಚಂದ್ರಾವತಿ ಒಗ್ಗು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಸಾಮಾನ್ಯ ಸ್ಥಾನದಿಂದ ಕೇಶವ ಕೆ ಗೌಡ., ಸಜಿಕುಮಾರ್ ಚೆಂಡೆಹಿತ್ಲು, ಈಶ್ವರ ಭಟ್ ಎನ್., ಪೂವಪ್ಪ ಗೌಡ ಮೇರೊಂಜಿ, ಗುಡ್ಡಪ್ಪ ಗೌಡ ಅಮೈ, ಗಿರೀಶ್ ಕೆ. ಸಾಮಾನ್ಯ ಮಹಿಳೆ ಸ್ಥಾನದಿಂದ ಯಮುನ ಸಣ್ಣಾರ, ಹೇಮಾವತಿ ತಿಮ್ಮಡ್ಕ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಿಟರ್ನಿಂಗ್ ಅಧಿಕಾರಿ ರಾಮಕುಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜೆರಾಲ್ದ್ ಮಸ್ಕರೇನಸ್ ಚುನಾವಣೆ ಪ್ರಕೃಯೆ ನಡೆಸಿಕೊಟ್ಟರು. ಸಂಘದ ಕಾರ್ಯನಿರ್ವಾಹಕ ಎಸ್. ಲಕ್ಷ್ಮಣ ಗೌಡ, ಸಹಾಯಕ ಮೋಹನ್ ಜಿ.ಒ. ಸಹಕರಿಸಿದರು.

Also Read  2020ನೇ ಸಾಲಿನ ಪದ್ಮಶ್ರೇಣಿ ಪ್ರಶಸ್ತಿಗೆ ಅರ್ಜಿ ಆಹ್ವಾನ

error: Content is protected !!
Scroll to Top