ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾಗಿದೆಯೇ ?  ► ಆಧಾರ್ ತಿದ್ದುಪಡಿಗೆ ಅವಕಾಶ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.18ಮಂಗಳೂರು  ಆಧಾರ್ ರೆಗ್ಯೂಲೇಷನ್ ಆಕ್ಟ್ 2018, 6ನೇ ತಿದ್ದುಪಡಿಯಂತೆ ವ್ಯಕ್ತಿಯ ಹೆಸರು, ಲಿಂಗ ಹಾಗೂ ಜನ್ಮ ದಿನಾಂಕ ತಿದ್ದುಪಡಿಯನ್ನು ಕೆಳಕಂಡ ಷರತ್ತಿನಂತೆ ಮಾತ್ರ ಆಧಾರ್ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.ಒಬ್ಬ ವ್ಯಕ್ತಿಯ ಜನ್ಮ ದಿನಾಂಕವು ಒಂದು ವರ್ಷಕ್ಕಿಂತ ಹೆಚ್ಚು/ಕಡಿಮೆಗೆ ಒಳಪಟ್ಟಿದ್ದಲ್ಲಿ, ಜನ್ಮ ದಿನಾಂಕವನ್ನು ಒಂದು ಬಾರಿ ಮಾತ್ರ ಆಧಾರ್ ಸೆಂಟರ್ ಗಳಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ.

 

 ವ್ಯಕ್ತಿಯ ಹೆಸರಿನಲ್ಲಿ ವ್ಯತ್ಯಾಸವಿದ್ದಲ್ಲಿ ಆಧಾರ್ ಸೆಂಟರ್‍ಗಳಲ್ಲಿ ಎರಡು ಬಾರಿ ಮಾತ್ರ ತಿದ್ದುಪಡಿ ಮಾಡಲು ಅವಕಾಶವಿದೆ. ವ್ಯಕ್ತಿಯ ಲಿಂಗ (ಗಂಡು/ಹೆಣ್ಣು) ನಮೂದಿಸುವಲ್ಲಿ ವ್ಯತ್ಯಾಸವಾಗಿದ್ದರೆ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.ಮೇಲಿನ ಷರತ್ತನ್ನು ಹೊರತು ಪಡಿಸಿ ಆಧಾರ್ ತಿದ್ದುಪಡಿಯಾಗಬೇಕಾಗಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಬೆಂಗಳೂರು ಪ್ರಾದೇಶಿಕ ಕಚೇರಿಗೆ ಹಾಜರಾಗಿ ಆಧಾರ್ ತಿದ್ದುಪಡಿ ಮಾಡಿಕೊಳ್ಳಬೇಕಾಗುತ್ತದೆ .ಪ್ರಾದೇಶಿಕ ಕಚೇರಿಯ ವಿಳಾಸ:UIDAI Regional Office, Khanija Bhavan, No. 49, 3rd Floor, South Wing Race Course Road, Bengaluru – 01.

Also Read  ಪಂಜ: ಯಕ್ಷಗಾನ ಕಲಾವಿದರಿಗೆ ಪಂಚಲಿಂಗೇಶ್ವರ ದೇವಾಲಯದ ವತಿಯಿಂದ ಗೌರವ ಸಲ್ಲಿಕೆ

 

 

error: Content is protected !!
Scroll to Top