ಉಪ್ಪಿನಂಗಡಿ:ಸೊಸೆ ಯೊಂದಿಗಿನ ಜಗಳದಿಂದ ನೊಂದ ವೃದ್ಧ ದಂಪತಿ ಆತ್ಮಹತ್ಯೆ ಯತ್ನ► ದೇಗುಲದ ಕಾವಲುಗಾರನಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com.ನೆಲ್ಯಾಡಿ,ಜ.18ಸೊಸೆ ಯೊಂದಿಗಿನ ಜಗಳದಿಂದ ನೊಂದ ವೃದ್ಧ ದಂಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದುನದಿ ಕಾವಲುಗಾರನ ಸಮಯ ಪ್ರಜ್ಞೆಯಿಂದ ಅವರನ್ನು ರಕ್ಷಿಸಲಾಗಿದೆ.ಬೆಳ್ತಂಗಡಿ ತಾಲೂಕು ಕರಂಬಾರು  ನಿವಾಸಿಗಳಾಗಿರುವ  ಗಂಗಾಧರ (70) ಹಾಗೂ ಇಂದಿರಾ (62) ಅವರು ಆತ್ಮಹತ್ಯೆಗೆ ಯತ್ನಿಸಿದವರು. ಮನೆಯಲ್ಲಿ ಸೊಸೆಯೊಂದಿಗೆ ಜಗಳವಾಡಿ  ಬುಧವಾರ  ಸಂಜೆ  ಮನೆ  ತೊರೆದು ಉಪ್ಪಿನಂಗಡಿಗೆ ಬಂದರು. ನಂತರ  ನೇತ್ರಾವತಿ ಮತ್ತು ಕುಮಾರ ಧಾರಾ ನದಿ ಸಂಗಮದ ಸ್ಥಳದಲ್ಲಿ ರಾತ್ರಿ ಕಳೆದಿದ್ದರು.

 

ಸಹಸ್ರಲಿಂಗೇಶ್ವರ ದೇವಸ್ಥಾನದ ಕಾವಲುಗಾರ ಆನಂದ  ಅವರು ನದಿಯಲ್ಲಿದ್ದ ಈ ಜೋಡಿಯ ಮೇಲೆ ನಿಗಾ ಇರಿಸಿದ್ದರು. ಗುರುವಾರ  ಮುಂಜಾನೆ ಈ ದಂಪತಿ ನದಿಯ ಆಳಕ್ಕೆ ಇಳಿದುದನ್ನು ಕಂಡು ಆನಂದ ಅವರು ಪೊಲೀಸರಿಗೆ ತಿಳಿಸಿದರು. ಧಾವಿಸಿ ಬಂದ ಪೊಲೀಸರು ದಂಪತಿಯನ್ನು ರಕ್ಷಿಸಿದರು.ಬಳಿಕ ಅವರನ್ನು 108 ಆ್ಯಂಬುಲೆನ್ಸ್‌ ನಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.  ದಂಪತಿಯ ಮಗನನ್ನು ಠಾಣೆಗೆ ಕರೆಸಿಕೊಂಡ  ಪೊಲೀಸರು ಹೆತ್ತವರ ಸುರಕ್ಷೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ  ಮುಚ್ಚಳಿಕೆ ಬರೆಸಿಕೊಂಡರು.

Also Read  ಬೋಸ್ಟನ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕನ್ನಡದ 'ಅಮೃತಮತಿ' ಆಯ್ಕೆ

 

error: Content is protected !!
Scroll to Top