(ನ್ಯೂಸ್ ಕಡಬ) newskadaba.com ಕಡಬ, ಜು.29. ಠಾಣಾ ವ್ಯಾಪ್ತಿಯ ಪುಳಿಕುಕ್ಕು ಎಂಬಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಗೆ ಸೇತುವೆಯ ಮೇಲಿನಿಂದ ಬಿದ್ದ ವ್ಯಕ್ತಿಯೋರ್ವರು ನೀರುಪಾಲಾದ ಘಟನೆ ಶನಿವಾರ ಅಪರಾಹ್ನ ನಡೆದಿದೆ.
ನೀರುಪಾಲಾದವರನ್ನು ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ಧರ್ಮಪಾಲ(43) ಎಂದು ಗುರುತಿಸಲಾಗಿದೆ. ಇವರು ಇಂದು ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೆಂಡತಿಗೆ ಕರೆ ಮಾಡಿ ಹೇಳಿದ್ದು, ನಂತರ ಸೇತುವೆಯ ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಧರ್ಮಪಾಲರವರ ಪತ್ನಿ ವಿಶಾಲಾಕ್ಷಿ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದಾರೆ.
ನೀರುಪಾಲಾದವರನ್ನು ಹುಡುಕುವ ಪ್ರಯತ್ನ ಮುಂದುವರಿದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಕಡಬ ಠಾಣಾ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ.