ದೋಳ್ಪಾಡಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

ನ್ಯೂಸ್ ಕಡಬ) newskadaba.com.ಕಾಣಿಯೂರು,ಜ.17. ಕಾಣಿಯೂರು: ದೋಳ್ಪಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟವು ನಡೆಯಿತು. ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ    ಗೋಪಾಲಕೃಷ್ಣ   ಪಿಜಕ್ಕಳ ಉದ್ಘಾಟಿಸಿದರು.ದೋಳ್ಪಾಡಿ ವಿಶ್ವ ಹಿಂದೂ ಪರಿಷತ್‍ನ ಅಧ್ಯಕ್ಷ ಲೋಕೆಶ್ ಶೇರ, ದೋಳ್ಪಾಡಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಪುರಂದರ ಕೂರೇಲು, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಲೋಕಯ್ಯ ಪರವ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರಾಮಣ್ಣ ಗೌಡ ಮರಕ್ಕಡ, ಶ್ರೀ.ಕ್ಷೇ. ಧ .ಗ್ರಾ.ಯೋಜನೆ ಅಧ್ಯ ಕ್ಷೆ ಭಾರತಿ ಕೂರೇಲು, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಅಧ್ಯ ಕ್ಷೆ ಅರುಣ ಎಂ.ಶೆಟ್ಟಿ ಉಪಸ್ಥಿತರಿದ್ದರು.

Also Read  ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೂ ಪ್ರವೇಶಿಸಿದ ಸೋಂಕು ➤ ಎಸ್ಐ, ಓರ್ವ ಕಾನ್ಸ್‌ಟೇಬಲ್‌ಗೆ ಪಾಸಿಟಿವ್

ಕಾಣಿಯೂರು ಗ್ರಾ.ಪಂ ಸದಸ್ಯರ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ`  ಉಮೇಶ್ ಆಚಾರ್ಯ ದೋಳ್ಪಾಡಿ ಸ್ವಾಗತಿಸಿ, ಸಹಶಿಕ್ಷಕ ಸಂದೇಶ್ ವಂದಿಸಿದರು. ಅರುಣ್  ರೈ ಬಳ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಕ್ರೀಡಾ ಕೂಟ ನಡೆಯಿತು.

 

error: Content is protected !!
Scroll to Top