ಕೊಕ್ಕಡ: ಕುಡಿಯಲು ಹಣ ನೀಡಲು ನಿರಾಕರಣೆ ► ಮದ್ಯದ ಬಾಟ್ಲಿಯಿಂದ ಕೆನ್ನೆಗೆ ಹೊಡೆದ ಭೂಪ

(ನ್ಯೂಸ್ ಕಡಬ) newskadaba.com.ಕೊಕ್ಕಡ, ಜ.17. ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮ ಕಾಪಿನಬಾಗಿಲು, ನಿವಾಸಿ  ಪಿ ವಸಂತ ಆಚಾರ್ಯ ಎಂಬವರು ದಿನಾಂಕ: 14.01.2019 ರಂದು ಸಂಜೆ ಹೊತ್ತಿಗೆ  ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕೊಕ್ಕಡ ಪೇಟೆಯಲ್ಲಿರುವ ಸಾಲ್ಯಾನ್ ವೈನ್ಸ್ ನ ಬಳಿ ನಿಂತಿದ್ದರು.

 

ಆ ಸಮಯಕ್ಕೆ  ಅಲ್ಲಿಗೆ ಬಂದ ಆರೋಪಿ ಹರೀಶ್ ನೇಕಾರ ಎಂಬವನು ಪಿ ವಸಂತ ಆಚಾರ್ಯ ರ ಬಳಿ  ಕುಡಿಯಲು ಹಣ ಕೇಳಿದಾಗ  ನನ್ನಲ್ಲಿ ಹಣ ಇಲ್ಲ ಎಂಬುದಾಗಿ ಪಿ ವಸಂತ ಆಚಾರ್ಯ ಹೇಳಿದರು.  ಈ ಕಾರಣಕ್ಕೆ ಕೋಪಗೊಂಡು  ಆರೋಪಿ  ತನ್ನ ಕೈಯಿಂದ ಪಿ ವಸಂತ ಆಚಾರ್ಯ ಅವರ ಕೆನ್ನೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಪ್ಯಾಂಟಿನ ಜೇಬಿನಲ್ಲಿದ್ದ ಮದ್ಯದ ಬಾಟ್ಲಿಯಿಂದ ಪಿ ವಸಂತ ಆಚಾರ್ಯ  ಅವರ ಎಡ ಬದಿ ಕೆನ್ನೆಗೆ ಹೊಡೆದಾಗ ಬಾಟ್ಲಿ ಒಡೆದು ಪಿ ವಸಂತ ಆಚಾರ್ಯ  ಕೆನ್ನೆಯ ಬಳಿ ರಕ್ತಗಾಯ ಉಂಟಾಗಿರುತ್ತದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Also Read  ಗುಡುಗು, ಬಿರುಗಾಳಿಸಹಿತ ಭಾರೀ ಮಳೆ ➤ ಬೆಚ್ಚಿ ಬಿದ್ದ ಬೆಂಗಳೂರಿಗರು

error: Content is protected !!
Scroll to Top