“ಸ್ವರ್ಗದ ಪೇರ್ ಕಂರ್ಬುದ ನೀರ್”► ಬಿಸಿಲ ದಾಹ ನೀಗಿಸುವ ಕಬ್ಬು ಜ್ಯೂಸ್

(ನ್ಯೂಸ್ ಕಡಬ) newskadaba.com.ಕಡಬ,ಜ.17. ಪೇಟೆ ಪಟ್ಟಣಗಳಲ್ಲಿ ಬಿಸಿಲ ಧಗೆಯ ದಾಹವನ್ನು ತಣಿಸಲು ಎಲ್ಲೆಡೆ ವಿವಿಧ ಕಂಪೆನಿಗಳ ತಂಪು ಪಾನಿಯಗಳು ರಾರಾಜಿಸಿಕೊಂಡು ಜನತೆಯನ್ನು ಸ್ವಾಗತಿಸಲು ಅಣಿಯಾಗುತ್ತಿವೆ. ಆದರೆ ಇದೀಗ ಎಲ್ಲೆಡೆ ರಸ್ತೆ ಬದಿಗಳಲ್ಲಿ ಸಿಗುತ್ತಿರುವ ಕಬ್ಬಿನ ಜ್ಯೂಸ್ ಸೆಂಟರ್‍ಗಳತ್ತ ಜನತೆ ಹೆಚ್ಚು ಆಕರ್ಷಿತರಾಗಿದದಾರೆ.ರಸ್ತೆ ಬದಿಯಲ್ಲಿ ಅಲ್ಲಲ್ಲಿ ತಲೆಯೆತ್ತಿರುವ ಕಬ್ಬಿನ ಜ್ಯೂಸ್ ಅಂಗಡಿಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.   ಪ್ರಾಕೃತಿಕ ಗಾಳಿಯನ್ನು ಸೇವಿಸಿಕೊಂಡು ನೈಸರ್ಗಿಕವಾಗಿ ಸಿಗುವ ಕಬ್ಬಿನ ಜ್ಯೂಸ್‍ಗಳನ್ನು ಸೇವಿಸುವತ್ತ ಜನತೆಯ ಚಿತ್ತ ಕೇಂದ್ರೀಕೃತಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಬಿಸಿಲ ದಾಹವನ್ನು ನೀಗಿಸಿಕೊಳ್ಳಲು ಜನತೆ  ಹತ್ತು ಹಲವು ತಂಪು ಪಾನಿಯಾಗಳಿಗೆ ಮೊರೆ ಹೋಗುತ್ತಾರೆ. ಇಂತಹ ಸಂಧರ್ಭದಲ್ಲಿ ಮಹಾರಾಷ್ಟ್ರ, ಆಂದ್ರಪ್ರದೇಶ, ಮುಂತಾದ ಕಡೆಗಳಿಂದ ಬಂದಿರುವ ಹಿಂದಿಯ ಬಯ್ಯಾಗಳು ಜನತೆಯ ದಾಹವನ್ನು ನೀಗಿಸುವುದರ ಜೊತೆಗೆ ತನ್ನ ಆದಾಯದ ಮೂಲವನ್ನು ಕಂಡುಕೊಳ್ಳುವ ಮೂಲಕ ಜೀವನೋಪಾಯವನ್ನು ಕಂಡುಕೊಳ್ಳುತ್ತಿದ್ದಾರೆ.

ಔಷದೀಯ ಗುಣವಿರುವ ಕಬ್ಬಿನ ಹಾಲು

ಬಾಟಲಿಗಳಲ್ಲಿ ಸಿಗುವ ತಂಪು ಪಾನೀಯಾಗಳಿಗಿಂತ ನೈಸರ್ಗಿಕವಾಗಿ ತಯಾರಿಸಲಾದ ಕಬ್ಬಿನ ಹಾಲಿನಲ್ಲಿ ಹಲವು ಔಷಧೀಯ ಗುಣಗಳು ಅಡಗಿಕೊಂಡಿದೆ. ಈ ಒಂದು ಗ್ಲಾಸ್ ತಂಪು ಕಬ್ಬಿನ ಹಾಲು ಬರೀ ಬಾಯಾರಿಕೆ ನೀಗಿಸುವುದಿಲ್ಲ. ಜೊತೆಗೆ ಇಡೀ ದೇಹಕ್ಕೆ ನೂತನ ಚೈತನ್ಯ, ಶಕ್ತಿಯನ್ನು ತುಂಬುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ಶರೀರ ಬೆವರುವುದರಿಂದ  ಎಲೆಕ್ರೋಲೈಟ್ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ಸುಸ್ತು ಹೆಚ್ಚಾಗುತ್ತದೆ.ಈ ವೇಳೆಯ ಒಂದು ಗ್ಲಾಸ್ ಕಬ್ಬಿನ ಹಾಲು ಇಡೀ ದೇಹಕ್ಕೆ ಶಕ್ತಿಯನ್ನು ತುಂಬುವಂತಹ ಅಮೃತವಾಗಿರುತ್ತದೆ. ಕಬ್ಬಿನಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಕಬ್ಬಿನ ರಸವು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರ ಜತೆಗೆ ಮಲಬದ್ದತೆಯನ್ನು  ನಿವಾರಿಸುತ್ತದೆ. ತೂಕ ಕಡಿಮೆ ಮಾಡಲು ಇಚ್ಚಿಸುವವರಿಗೆ ಇದು ಪರಿಪೂರ್ಣ ಪಾನೀಯವಾಗಿದೆ. ಅಲ್ಲದೆ ದೇಹದಲ್ಲಿರುವ ಬೇಡವಾದ  ಕೊಬ್ಬನ್ನು ಸಹ ಕರಗಿಸುವ ಶಕ್ತಿ ಕಬ್ಬಿನಲ್ಲಿದೆ.

Also Read  ಎಂ.ಜೆ.ಎಸ್.ಎಸ್.ಎ. ಮಂಗಳೂರು ಧರ್ಮಪ್ರಾಂತ್ಯದ ಮುಖ್ಯ ನಿರ್ದೇಶಕರಾಗಿ ಫಾ| ಪಿ.ಕೆ. ಅಬ್ರಹಾಂ ಆಯ್ಕೆ

ನೈಸರ್ಗಿಕವಾಗಿರುವ ಸಿಹಿ

ಪೇಟೆ ಪಟ್ಟಣಗಳಲ್ಲಿ ಸಿಗುವ ವಿವಿಧ ಕಂಪೆನಿಗಳ ತಂಪು ಪಾನೀಯಾಗಳು ಕೃತಕ ಸಿಹಿಯಿಂದ ಕೂಡಿರುತ್ತದೆ. ಆದರೆ ಕಬ್ಬು ನೈಸರ್ಗಿಕವಾಗಿಯೇ ಸಿಹಿಯಿಂದ ಕೂಡಿರುತ್ತದೆ. ಇದಕ್ಕೆ  ಸಿಹಿ ಸೇರಿಸುವ ಅಗತ್ಯವಿಲ್ಲ. ಆದರೂ ರುಚಿಗಾಗಿ ನಿಂಬೆ, ಶುಂಠಿಯ ಜೊತೆಗೆ ತಂಪಿಗಾಗಿ ಐಸ್‍ಗಡ್ಡೆಯನ್ನು ಸೇರಿಸಿ ನೀಡಲಾಗುತ್ತದೆ.

ಆಕರ್ಷಕ ನಾಮಫಲಕಗಳು

ಇಡೀ ಪಾನೀಯದ ವ್ಯವಸ್ಥೆಯಲ್ಲಿ ಕಬ್ಬಿನ ಜ್ಯೂಸನ್ನು ಮಾತ್ರ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಅತ್ಯಂತ ಇಷ್ಟಪಡುತ್ತಾರೆ. ಗ್ರಾಮೀಣ ಪ್ರದೇಶದ ರಸ್ತೆ ಬದಿಗಳಲ್ಲಿ ಮರದ ನೆರಳಿನ ಆಶ್ರಯದಲ್ಲಿ ಪ್ರತೀ ಕಿ.ಮೀ ದೂರದಲ್ಲಿ ಕಾಣಸಿಗುವ ಜ್ಯೂಸ್ ಸೆಂಟರ್‍ಗಳು ಗ್ರಾಮೀಣ ಜನತೆಯನ್ನು ಸಹ ಅತ್ಯಂತ ಆಕರ್ಷಿಸುವಂತೆ ಮಾಡಿಕೊಂಡಿದೆ. “ಸ್ವರ್ಗದ ಪೇರ್ ಕಂರ್ಬುದ ನೀರ್” ಎಂಬ ವಿಶಿಷ್ಟ ನಾಮ ಫಲಕಆಲಂಕಾರಿನ ಅಂಗಡಿಯೊಂದರಲ್ಲಿ  ಬರಹದೊಂದಿಗೆ ದೂರದ ಪ್ರವಾಸಿರನ್ನು ಮತ್ತು ಜನತೆಯನ್ನ ತನ್ನ ಅಂಗಡಿಗಳತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

Also Read  ನಿಮ್ಮ ಭಾಗ್ಯದಲ್ಲಿ ಸರ್ಕಾರಿ ನೌಕರಿ ಖಾಸಗಿ ಅಥವಾ ಸ್ವಂತ ಬಿಜಿನೆಸ್ ಏನಿದೆ ರೇಖೆ ಮೂಲಕ ತಿಳಿಯಿರಿ ಕಷ್ಟಗಳಿಗೆ ಪರಿಹಾರ ಪಡೆದುಕೊಳ್ಳಿ

ರಸ್ತೆ ಬದಿಯಲ್ಲೆ ಜ್ಯೂಸ್ ಸೆಂಟರ್‍ಗಳು.

ಇದೀಗ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಕಿ.ಮೀ ದೂರಕ್ಕೂಂದು ಕಬ್ಬಿನ ಜ್ಯೂಸ್ ಸೆಂಟರ್‍ಗಳು ನಿರ್ಮಾಣವಾಗುತ್ತಿದೆ. ಮುಖ್ಯವಾಗಿ ಕಡಬದಿಂದ ಉಪ್ಪಿನಂಗಡಿ ರಸ್ತೆಯ ಮಧ್ಯದಲ್ಲಿ ಕಡಿಮೆಯೆಂದರೂ  15 ಕಬ್ಬಿನ ಜ್ಯೂಸ್ ಸೆಂಟರ್‍ಗಳು ಈಗಾಗಲೇ ನಿರ್ಮಾಣವಾಗಿದೆ. ಯಾವುದೇ ಬಾಡಿಗೆ, ತೆರಿಗೆ, ವಿದ್ಯುತ್ ಬಿಲ್ ಪಾವತಿಯ ಹೊರೆ ಇಲ್ಲದಿರುವುದರಿಂದ ಮಾಲಿಕರಿಗೆ ಸಂಪಾದನೆಯ ಹೆಚ್ಚಿನ ಪಾಲು ಉಳಿತಾಯವಾಗುತ್ತದೆ.

 

ಜಯಂತ,  ಕುದ್ಮಾರು ಶ್ರೀದುರ್ಗಾಪರಮೇಶ್ವರೀ ಕಬ್ಬಿನ ಜ್ಯೂಸ್ ಸೆಂಟರ್‍ನ ಮಾಲಕ

ಕಬ್ಬು ಹಾಸನ, ಶಿವಮೊಗ್ಗ ಮುಂತಾದ ಪ್ರದೇಶದಿಂದ ಮಾತ್ರ ಸರಬರಾಜಾಗುತ್ತಿದೆ. ಕಬ್ಬಿನ ಜ್ಯೂಸ್‍ಗೆ ಬೇಡಿಕೆ ಹೆಚ್ಚಾದಂತೆ ಕಬ್ಬಿನ ಕೊರತೆಯು ಕಾಡುತ್ತಿದೆ. ಬೇಸಿಗೆಯಲ್ಲಿ ಕೇವಲ ಮೂರಿಂದ ನಾಲ್ಕು ದಿನಗಳು ಮಾತ್ರ ಕಬ್ಬು ಉಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ 18 ಕಬ್ಬಿನ ದಿಂಡಿಗೆ 230ರಿಂದ 250 ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನತೆ ಈಗ ಸ್ವಚ್ಚತೆಗೆ ಹೆಚ್ಚು ಪ್ರಾಧಾನ್ಯತೆ ನೀಡುವುದರಿಂದ ಜ್ಯೂಸ್ ಸೆಂಟರ್‍ನ ಸ್ವಚ್ಚತೆಯ ಆಧಾರದಲ್ಲಿ ನಮ್ಮ ವ್ಯಾಪಾರ ವಹಿವಾಟು ನಿಂತಿದೆ.

Also Read  ಮಲೇರಿಯಾ ಮುಕ್ತದತ್ತ "ಕರಾವಳಿ' !!! ➤ ಸಾವಿರದಷ್ಟಿದ್ದ ಮಲೇರಿಯಾ ಈಗ ಬಹು ಪ್ರಮಾಣದಲ್ಲಿ ಇಳಿಕೆ

error: Content is protected !!
Scroll to Top