ಮೊಬೈಲ್ ನಲ್ಲಿ ಮಾತನಾಡುತ್ತಾ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.17. ಯುವತಿಯೋರ್ವಳು ಮೊಬೈಲಿನಲ್ಲಿ ಮಾತನಾಡುತ್ತಾ, ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ಬುಧವಾರ ರಾತ್ರಿ ಉಳ್ಳಾಲದಲ್ಲಿ ಸಂಭವಿಸಿದೆ.

ನೇತ್ರಾವತಿ ಸೇತುವೆಯಲ್ಲಿ ನಿಂತು ಒಂಟಿ ಯುವತಿ ಅಳುತ್ತಾ ಮೊಬೈಲಿನಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿದ ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರರು, ಬೈಕ್ ನಿಲ್ಲಿಸಿ ಯುವತಿ ಜೊತೆ ಮಾತನಾಡಬೇಕೆನ್ನುವಷ್ಟರಲ್ಲಿ ಯುವತಿ ಏಕಾಏಕಿ ನದಿಗೆ ಹಾರಿದ್ದಾಳೆ. ಸುಮಾರು 20ರ ಹರೆಯದ ಯುವತಿ ಹೆಗಲಿನಲ್ಲಿ ಬ್ಯಾಗ್ ಮತ್ತು ಯೂನಿಫಾರಂ ಧರಿಸಿದ್ದ ರೀತಿಯಲ್ಲಿ ಕಂಡುಬಂದಿದ್ದು, ಕತ್ತಲು ಆವರಿಸಿದ್ದರಿಂದಾಗಿ ಯೂನಿಫಾರಂ ಬಣ್ಣ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ರಕ್ತಚಂದನ ಮರದ ದಿಮ್ಮಿ ಅಕ್ರಮ ದಾಸ್ತಾನು ಪ್ರಕರಣ ➤‌ ಆರೋಪಿಗಳ ಜಾಮೀನು ಅರ್ಜಿ ವಜಾ

error: Content is protected !!
Scroll to Top