ಬಂಟ್ವಾಳ: ತಂದೆ ಮಗನ ಜಗಳ ನೋಡಲಾರದೆ ಮನೆ ಯಜಮಾನಿ ದನ ಕಟ್ಟುವ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com.ಬಂಟ್ವಾಳ, ಜ.16.ತಂದೆ ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋದನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲಿ ತಂದೆ ಮಗನ ಗಲಾಟೆ ಮನೆ ಯಜಮಾನಿಯೇ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಈ ಘಟನೆ ನಡೆಸಿರುವುದು ಬಂಟ್ವಾಳ ತಾಲೂಕಿನ ತಣ್ಣೀರುಪಂತ ಎಂಬಲ್ಲಿ ನಡೆದಿದೆ.

ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ರಾಜೀವ ಪೂಜಾರಿ ಅವರ ಪತ್ನಿ ಚಂದ್ರಾವತಿ (55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ರಾಜೀವ ಪೂಜಾರಿ ಅವರಿಗೆ ನಾಲ್ವರು ಮಕ್ಕಳು, ಅವರಲ್ಲಿ ಕೊನೆಯ ಮಗ ನವೀನ್, ತಂದೆ ತಾಯಿಯ ಜೊತೆ ವಾಸವಾಗಿದ್ದ. ಇತ್ತೀಚಿನ ದಿನಗಳಲ್ಲಿ ತಂದೆ ಮತ್ತು ಮಗನಿಗೆ ನಿತ್ಯ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ನಡೆಯುತ್ತಿತ್ತು. ಮಂಗಳವಾರವೂ ಕೂಡಾ ಮಧ್ಯಾಹ್ನದ ವೇಳೆ ಗಲಾಟೆನಡೆದಿತ್ತು. ದಿನಾ ತಂದೆ ಮಗನ ಜಗಳ ನೋಡಿ ರೋಸಿ ಹೋಗಿದ್ದ ಮನೆಯೊಡತಿ  ಕೊನೆಗೆ ಆತ್ಮಹತ್ಯೆಗೆ ಶರಣಾದರು.

Also Read  ಬಿಎಸ್ ವೈ ಪ್ರಮಾಣವಚನ ➤ಇಂದು ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

 

ಪ್ರತಿನಿತ್ಯ ಇವರ ಗಲಾಟೆ ನೋಡಿ ನೋಡಿ ಸಹಿಸಲಾಗದ ಚಂದ್ರವತಿ ಮಂಗಳವಾರದಂದು ಇವರ ಗಲಾಟೆ ನಡೆಯುತ್ತಿದ್ದಂತೆ ದನ ಕಟ್ಟುವ ಹಗ್ಗವನ್ನು ಹಿಡಿದುಕೊಂಡು ಹೋಗಿ ಅಲ್ಲೇ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

error: Content is protected !!
Scroll to Top