ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥೋತ್ಸವ

(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ ,ಜ.16.ಮಕರ ಸಂಕ್ರಮಣ ಪ್ರಯುಕ್ತ ಮಂಗಳವಾರ ಬೆಳಗ್ಗೆ ಶ್ರೀ ದೇಗುಲದಲ್ಲಿ ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥೋತ್ಸವ ಜರಗಿತು.ದೇಗುಲದ ಹೊರಾಂಗಣದಲ್ಲಿ ಶ್ರೀ ದೇವರ ಉತ್ಸವ ನಡೆದ ಬಳಿಕ ರಥಬೀದಿಯಲ್ಲಿ ಪಂಚಮಿ ರಥೋತ್ಸವ ನಡೆಯಿತು.

ದೇವರು ಬೀದಿಗೆ ಬರುವ ಮುಂಚಿತ ಕ್ಷೇತ್ರದ ಹೊಸೊಳಿಗಮ್ಮ ದೈವವು ದೇಗುಲದ ಮುಂಭಾಗದಲ್ಲಿ ದೇವರಿಗೆ ಕಾಣಿಕೆ ನೀಡಿತು. ಬಳಿಕ ರಥಬೀದಿಯಲ್ಲಿ ರಥೋತ್ಸವ ನೆರವೇರಿತು. ಈ ವೇಳೆ ದೈವವು ರಥದ ಜತೆ ಕಟ್ಟೆಪೂಜೆ ನಡೆಯುವ ತನಕ ತೆರಳಿ ದೇವರು ದೇಗುಲದ ಒಳಗೆ ಪ್ರವೇಶಿಸುವ ತನಕ ಪಾಲ್ಗೊಂಡಿತು. ಸವಾರಿ ಮಂಟಪದಲ್ಲಿ ಶ್ರೀ ದೇವರಿಗೆ ಕಟ್ಟೆಪೂಜೆ ನೆರವೇರಿತು. ಸೋಮವಾರ ರಾತ್ರಿ ಕುಕ್ಕೆಲಿಂಗ ಜಾತ್ರೆ ಹಿನ್ನೆಲೆಯಲ್ಲಿ ದೇಗುಲದ ಹೊರಾಂಗಣದಲ್ಲಿ ಶ್ರೀ ದೇವರ ಬಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಅನಂತರ ಕಾಜುಕುಜುಂಬ ದೈವದ ನಡಾವಳಿ ನೆರವೇರಿತು. ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

Also Read  ಹೆತ್ತವರೊಂದಿಗೆ ಕೂಲಿ ಮಾಡುತ್ತಿದ್ದಾತ ಇದೀಗ ಕೊಣಾಜೆ ಠಾಣೆಯ ಎಸ್ಐ ► ಯುವಕರಿಗೆ ರೋಲ್ ಮಾಡೆಲ್ ಆದ ಸಾಧಕನ ಯಶೋಗಾಥೆ

 

error: Content is protected !!
Scroll to Top