ಎಲ್ಲಿ ಆಪರೇಷನ್​ ಮಾಡಿದ್ದಾರೆ? ಖಾಯಿಲೆ ವಾಸಿಯಾಯಿತಾ ಗೊತ್ತಿಲ್ಲ ► ಸ್ಪೀಕರ್​ ರಮೇಶ್​ಕುಮಾರ್​

(ನ್ಯೂಸ್ ಕಡಬ) newskadaba.com ಬೆಂಗಳೂರು,ಜ.15. ನನಗೆ ತಿಳಿದ ಮಟ್ಟಿಗೆ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಸ್ಪೀಕರ್​ ರಮೇಶ್​ ಕುಮಾರ್ ​ಅವರು ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ನನಗೆ ಆಪರೇಷನ್​ ಕಮಲನೂ ಗೊತ್ತಿಲ್ಲ, ಸಂಪಿಗೆಯೂ ಗೊತ್ತಿಲ್ಲ ಎಂದು ​ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿ, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಯಾರು ಮುಂಬೈನಲ್ಲಿದ್ದಾರೆ, ಶ್ರೀಲಂಕಾದಲ್ಲಿದ್ದಾರೆ ನನಗೆ ಗೊತ್ತಿಲ್ಲ. ಯಾವ ಆಪರೇಷನ್​? ಅದನ್ನು ಎಲ್ಲಿ ಮಾಡಿದ್ದಾರೆ ? ಕೆಳಗೋ, ಮೇಲೋ,ಹಿಂದೆಯೋ, ಮುಂದೋ ಎಲ್ಲಿ ಆಪರೇಷನ್​ ಮಾಡಿದ್ದಾರೆ? ಖಾಯಿಲೆ ವಾಸಿಯಾಯಿತಾ ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದರು.ಚುನಾವಣೆಗೆ ಕೊಟ್ಟ ವಿಳಾಸದಲ್ಲೇ ನಾನು ಸಿಗುತ್ತೇನೆ. ತುಂಬ ಸುಳ್ಳುಸುದ್ದಿಗಳು ಹರಿದಾಡುತ್ತಿವೆ. ಇದೆಲ್ಲ ಅವಿವೇಕವಲ್ಲವಾ ಎಂದು ಪ್ರಶ್ನಿಸಿದರು.

Also Read  30 ನಗರಗಳೊಂದಿಗೆ 'ಸಿಸ್ಟರ್ ಸಿಟಿ' ಒಪ್ಪಂದ ಮಾಡಿಕೊಂಡ ನಿತ್ಯಾನಂದ

 

 

ನಾನು ಅಂಕಿ ಅಂಶಗಳ ಆಧಾರದ ಮೇಲೆ ಹೇಳುತ್ತೇನೆ. ಸರ್ಕಾರ ಭದ್ರವಾಗಿದೆ. ನಾನಿಲ್ಲಿಗೆ ಜನರ ಜತೆ ಕಾಲ ಕಳೆಯಲು ಬಂದಿದ್ದೇನೆ. ನಿಮ್ಮ ಕೈಗೂ ಸಿಕ್ಕಿದ್ದೇನೆ. ಸಭಾಪತಿ ಸ್ಥಾನ ದೊಡ್ಡದು. ಅದರ ಗೌರವವನ್ನು ಕಾಪಾಡುತ್ತೇನೆ. ಉಳಿದಂತೆ ಏನೂ ರಾಜಕೀಯ ಬೆಳವಣಿಗೆ ಗೊತ್ತಿಲ್ಲ. ನಾನಂತೂ ಎಲ್ಲೂ ಹೋಗಿಲ್ಲ.

 

error: Content is protected !!
Scroll to Top