ಜನವರಿ 14 ಮತ್ತು 15 ರಂದು ಶಾಂತಿಮೊಗರು ರಸ್ತೆಗೆ ಡಾಮರೀಕರಣ ► ಸಾರ್ವಜನಿಕರು ಸಂಚರಿಸದಂತೆ ಲೋಕೋಪಯೋಗಿ ಇಲಾಖೆಯಿಂದ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜ.13. ಆಲಂಕಾರಿನಿಂದ ಶಾಂತಿಮೊಗರು ಮೂಲಕ ಪುತ್ತೂರನ್ನು ಸಂಪರ್ಕಿಸುವ ರಸ್ತೆಗೆ ಜನವರಿ 14 ಮತ್ತು 15 ರಂದು ಡಾಮರೀಕರಣ ನಡೆಯಲಿರುವ ಕಾರಣ ಈ ರಸ್ತೆಯಲ್ಲಿ ಎರಡು ದಿನಗಳ ಕಾಲ ವಾಹನ ಸಂಚರಿಸದಂತೆ ಲೋಕೋಪಯೋಗಿ ಇಲಾಖೆಯು ಸಾರ್ವಜನಿಕರಲ್ಲಿ ವಿನಂತಿಸಿದೆ.

ಕುದ್ಮಾರು ಶಾಂತಿಮುಗೇರು ಕಿಮೀ 0.00 ರಿಂದ 0.80 ಕಿಮೀ ವರೆಗಿನ ರಸ್ತೆಯ ಡಾಮರೀಕರಣ ಕಾಮಗಾರಿ ನಡೆಯಲಿದ್ದು, ಬಸ್ ಹಾಗೂ ಇತರ ವಾಹನ ಸಂಚಾರಕ್ಕೆ ಅಡಚಣೆಯಾಗುವ ಸಂಭವವಿರುದರಿಂದ ಎರಡು ದಿನಗಳ ಕಾಲ ಸದರಿ ರಸ್ತೆಯಲ್ಲಿ ಸಂಚಾರಿಸದೇ ಇರುವದು ಸೂಕ್ತ. ಸಾರ್ವಜನಿಕರು ಸಹಕರಿಸಬೇಕಾಗಿ ಪುತ್ತೂರು ಲೋಕೋಪಯೋಗಿ ಇಲಾಖೆಯ ಪ್ರಕಟಣೆ ತಿಳಿಸಿದೆ.

Also Read  ನಿಗಮದಿಂದ ಯುವಕರಿಗೆ ಬೈಕ್ ಖರೀದಿಗೆ ಸಾಲ -ಅರ್ಜಿ ಆಹ್ವಾನ

error: Content is protected !!
Scroll to Top