ಮಂಗಳೂರು:ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಶ್ವಿನಿ ಹೊಳ್ಳ ►ಅವರಿಗೆ ಐಇಇಇ ಅತ್ಯುತ್ತಮ ಘಟಕ ಕೌನ್ಸಿಲರ್ ಗೌರವ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.13.ಇನ್‍ಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್(ಐಇಇಇ) ಬೆಂಗಳೂರು ಘಟಕದ ವತಿಯಿಂದ ನೀಡಲಾಗುವಐಇಇಇ ವಿದ್ಯಾರ್ಥಿಗಳ ಅತ್ಯುತ್ತಮ ಘಟಕ ಕೌನ್ಸಿಲರ್ ಗೌರವಕ್ಕೆ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಐಇಇಇ ಘಟಕದ ಕೌನ್ಸಿಲರ್ ಆಗಿರುವ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ ಸಹಪ್ರಾಧ್ಯಾಪಕಿ ಅಶ್ವಿನಿ ವಿ.ಆರ್ ಹೊಳ್ಳ ಪಾತ್ರರಾಗಿದ್ದಾರೆ.ಬೆಂಗಳೂರಿನದಯಾನಂದ ಸಾಗರ ವಿವಿಯಲ್ಲಿ ಇತ್ತೀಚಿಗೆ ನಡೆದ ಐಇಇಇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಗೌರವ ಪ್ರದಾನ ಮಾಡಲಾಯಿತು.

2017 ಮತ್ತು 2018ರಲ್ಲಿ ಸತತ ಎರಡು ಬಾರಿ ಕಾಲೇಜಿನ ಐಇಇಇ ಘಟಕವು ಅತ್ಯುತ್ತಮ ವಿದ್ಯಾರ್ಥಿ ಘಟಕ ಪ್ರಶಸ್ತಿ ಹಾಗೂ 2016 ಮತ್ತು 2018ರಲ್ಲಿ ಘಟಕವು ಬೆಸ್ಟ್ ಸ್ಟೂಡೆಂಟ್ ವಾಲಂಟೀಯರ್ ಪ್ರಶಸ್ತಿ ಪಡೆಯುವಲ್ಲಿ ಅಶ್ವಿನಿ ಕೊಡುಗೆ ಸಲ್ಲಿಸಿದ್ದರು.

Also Read  ಓವರ್ ಟೇಕ್ ಭರದಲ್ಲಿ ಸರಣಿ ಅಪಘಾತ - ನಾಲ್ವರಿಗೆ ಗಾಯ

error: Content is protected !!
Scroll to Top