ಎಣಿತಡ್ಕ: ದೈವಗಳ ಪುನಃಪ್ರತಿಷ್ಠಾಮಹೋತ್ಸವ ಹಾಗೂ ನೇಮೋತ್ಸವ

(ನ್ಯೂಸ್ ಕಡಬ) newskadaba.com.ಕಡಬ,ಜ.13.ಕಡಬ ತಾಲೂಕಿನ ಕೊೈಲ ಗ್ರಾಮದ ಏಣಿತಡ್ಕ ಶ್ರೀ ಗ್ರಾಮದೈವ ಶಿರಾಡಿ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ ಕಲಶಾಭಿಷೇಕ ಮಹೋತ್ಸವ ಹಾಗೂ ನೇಮೋತ್ಸವ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಿತು.ವೇದಮೂರ್ತಿ ವೆಂಕಟ್ರಮಣ ಕುದುರೆತ್ತಾಯ ಅವರು ದೈವಗಳ ಪ್ರತಿಷ್ಠೆ ಹಾಗೂ ನಾಗ ಪ್ರತಿಷ್ಠಾ ಕಾರ್ಯ ನೆರವೇರಿಸಿದರು. ಮಂಗಳವಾರ ಸಂಜೆ ನಾಗನಕಟ್ಟೆಯಲ್ಲಿ ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ಬಿಂಬ ಶುದ್ಧಿ, ದಿಕ್ಪಾಲಕ ಬಲಿ ನಡೆಯಿತು.

ಬುಧವಾರ ಬೆಳಿಗ್ಗೆ ಗಣಹೋಮ, ಪ್ರಧಾನ ಹೋಮ, ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಕಲಶಾಭಿಷೇಕ, ನಾಗ ಕಲ್ಪೋಕ್ತ ಪೂಜೆ, ತಂಬಿಲ ಮಹಾಪೂಜೆ ನಡೆಯಿತು. ಸಂಜೆ ಭೂತಾಲಯದಲ್ಲಿ ಸ್ಥಳ ಶುದ್ಧಿ ಬಿಂಬ ಶುದ್ಧಿ ಇತ್ಯಾದಿ ಧಾರ್ಮಿಕ ವಿಧಿವಿದಾನಗಳು ನಡೆದವು. ಗುರುವಾರ ಬೆಳಿಗ್ಗೆ ದುರ್ಗಾ ಹೋಮ, ಗಣಹೋಮ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ಶಿರಾಡಿ ಹಾಗೂ ಪರಿವಾರ ದೈಗಳ ಭಂಡಾರ ತೆಗೆದು ರಾತ್ರಿ ಪ್ರಾರಂಭವಾದ ನೇಮೋತ್ಸವ ಶುಕ್ರವಾರ ಮಧ್ಯಾಹ್ನ ತನಕ ನೆರವೇರಿತು. ಬಳಿಕ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು ಬಿಂದಾರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರ ನಾಯ್ಕ ಚೆಕ್ಕಿತಡ್ಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಆಡಳಿತದಾರ ಸಂತೋಷ್ ರೈ ಸಬಳೂರು, ಕಾರ್ಯದರ್ಶಿಗಳಾದ ಉದಯ ಕುಮಾರ್, ಸುಂದರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Also Read  ಆರೋಗ್ಯಕರ ಚರ್ಮಕ್ಕೆ ಬಳಸಿ ದಿ ಬೆಸ್ಟ್ ಫೇಸ್ ವಾಶ್

error: Content is protected !!
Scroll to Top