ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಪುಸಲಾಯಿಸಿ ಕರೆದೊಯ್ದ ಫೇಸ್ ಬುಕ್ ಫ್ರೆಂಡ್ ► ಜೊತೆಯಾಗಿ ತೆರಳುತ್ತಿದ್ದಾಗ ಬಂಟ್ವಾಳದಲ್ಲಿ ಕಾರು ಅಪಘಾತ

(ನ್ಯೂಸ್ ಕಡಬ) newskadaba.com. ಮಂಗಳೂರು,ಜ.12.ಮಂಗಳೂರಿನ ಯುವತಿಯೋರ್ವರು ಸಂಜೆ ವೇಳೆ ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ಬಸ್ ತಂಗುದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು. ಆ ಸಮಯಕ್ಕೆ ಅವರಿಗೆ ಫೇಸುಬುಕ್  ಮುಖಾಂತರ ಪರಿಚಯವಾದ ಮನ್ಸೂರು ಎಂಬಾತನು ಓಮ್ನಿ ಕಾರಿನಲ್ಲಿ ಅಲ್ಲಿಗೆ ಬಂದರು. ಯುವತಿಯನ್ನು ಮನ್ಸೂರು ಕಾರಲ್ಲಿ ಬಾ ಎಂದು ಕರೆದಾಗ ಯುವತಿ ಬರಲು ಒಪ್ಪದಿದ್ದಾಗ ಒತ್ತಾಯ ಪೂರ್ವಕವಾಗಿ ಹೇಗೋ ಪುಸಲಾಯಿಸಿಕೊಂಡು ಕಾರಿನಲ್ಲಿ ಕುಳ್ಳಿರಿಸಿ ಯುವತಿಯ ಮನೆಗೆ ಬಿಡುವುದಾಗಿ ಹೇಳಿದನು.

ಬಳಿಕ ಮನೆಗೆ ಬಿಡದೇ ಬೇರೆ ಬೇರೆ ರಸ್ತೆಗಳಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಕೊಡ್ಮಾಣ್ ಗ್ರಾಮದ ಕೊಡ್ಮಾಣ್ ಎಂಬಲ್ಲಿಗೆ ತಲುಪಿದಾಗ ಕಾರು ಚಾಲಕ ಕಾರನ್ನು ತಿರುವು ಹಾಗೂ ಇಳಿಜಾರು ರಸ್ತೆಯಲ್ಲಿ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬದಿಗೆ ಚಲಾಯಿಸಿಕೊಂಡು ಹೋದ ಪರಿಣಾಮ ಕಾರು ಚರಂಡಿಗೆ ಮಗುಚಿ ಬಿದ್ದು ಅಪಘಾತವಾಗಿರುತ್ತದೆ. ಈ ಅಪಘಾತದ ಪರಿಣಾಮ ಯುವತಿಯ ಎಡಬದಿ ಹುಬ್ಬಿಗೆ ರಕ್ತಗಾಯ ಹಾಗೂ ಎಡಕೋಲು ಕೈಗೆ ಜಖಂ ಆಗಿರುವುದಲ್ಲದೆ ಬಲ ಮುಂಗೈಗೆ ತರಚಿಗೊಂಡಿರುತ್ತದೆ. ಗಾಯಗೊಂಡ ಗಾಯಾಳು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Also Read  ಪಿಲಿಕುಳದಲ್ಲಿ ಅಂತರಾಷ್ಟ್ರೀಯ ಹುಲಿಯ ದಿನಾಚರಣೆ

error: Content is protected !!
Scroll to Top