ಪುತ್ತೂರು: ಜಿಲ್ಲಾ ಯುವ ಪ್ರಶಸ್ತಿಗೆ ಸವಣೂರು ಯುವಕ ಮಂಡಲ ಆಯ್ಕೆ

(ನ್ಯೂಸ್ ಕಡಬ) newskadaba.com.ಪುತ್ತೂರು,ಜ.12. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2018-19ನೇ ಸಾಲಿನಲ್ಲಿ ಕ್ರೀಡೆ, ಸಾಂಸ್ಕ್ರತಿಕ, ಹಾಗೂ ಸಮುದಾಯ ಅಭಿವ್ರೃಧ್ಧಿ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಚಟುವಟಿಕೆ ನಿರ್ವಹಿಸಿರುವ ಯುವಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ  ಜಿಲ್ಲಾ ಯುವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಹ್ವಾನಿತ ಅರ್ಜಿಗಳ ಪ್ರಸ್ತಾವನೆಯನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸದಸ್ಯರು ಪರಿಶೀಲಿಸಿ ಅದರಲ್ಲಿ ಈ ಕೆಳಗಿನಂತೆ ವೈಯಕ್ತಿಕ ವಿಭಾಗ ಮತ್ತು ಸಾಂಘಿಕ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.

ವೈಯಕ್ತಿಕ ವಿಭಾಗದಲ್ಲಿ: ದಿವ್ಯಶ್ರೀ, ಯುವತಿ ಮಂಡಲ(ರಿ) ಹಳೆಯಂಗಡಿ, ಮಂಗಳೂರು. ಯತೀಶ್ ಕುಮಾರ್. ಕೆ. ಎಂ., ಸವಣೂರು ಯುವಕ ಮಂಡಲ(ರಿ) ಪುತ್ತೂರು, ಪಿ.ಎ. ಸುಬ್ರಮಣಿ,  ನೆಲ್ಲಿಕುಮೇರಿ ಫ್ರೆಂಡ್ಸ್ ಕ್ಲಬ್ (ರಿ), ಸುಳ್ಯ,  ಸ್ಮಿತೇಶ್.ಎಸ್., ಗುರುಮಿತ್ರ ಸಮೂಹ(ರಿ), ಬೆಳ್ತಂಗಡಿ. ರಾಜೇಶ್.ಎ.,  ಶ್ರೀ ಜನಾರ್ಧನ ಯುವಕ ಮಂಡಲ(ರಿ) ಪಡ್ನೂರು, ಪುತ್ತೂರು. ಸಾಂಘಿಕ ವಿಭಾಗದಲ್ಲಿ: ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ರ್ಸ್ ಕ್ಲಬ್(ರಿ), ತೋಕೂರು, ಹಳೆಯಂಗಡಿ, ಮಂಗಳೂರು.  ಯುವತಿ ಮಂಡಲ(ರಿ) ಹಳೆಯಂಗಡಿ, ಮಂಗಳೂರು.

Also Read  ಬೆಂಗಳೂರು ಭಾರಿ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ

ಜಿಲ್ಲಾ ಯುವ ಪ್ರಶಸ್ತಿಗೆ ವೈಯಕ್ತಿಕ ಹಾಗೂ ಸಾಂಘಿಕ ಪ್ರಶಸ್ತಿಗೆ ಆಯ್ಕೆಯಾದವರಿಗೆ ಜನವರಿ 12 ರಂದು ಪುತ್ತೂರು ತಾಲೂಕಿನ ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜು, ಸವಣೂರು ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವಜನ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಯುವ ಸಪ್ತಾಹ, ದ.ಕ. ಜಿಲ್ಲಾ ಮಟ್ಟದ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯುವ ಸಮ್ಮೇಳನ, ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ  ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top