ಕೊಡಗು:  ಜನವರಿ 15 ರಂದು ಬ್ಯಾರಿ ಸಮಾವೇಶ

(ನ್ಯೂಸ್ ಕಡಬ) newskadaba.com.ಕೊಡಗು,ಜ.12. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಗು ಬ್ಯಾರೀಸ್ ವೆಲ್‍ಫೇರ್ ಟ್ರಸ್ಟ್ ಇದರ ಸಹಯೋಗದೊಂದಿಗೆ 2019 ರ ಜನವರಿ 15ರಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ “ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ”ವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11.30 ಗಂಟೆಗೆ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಮಾಡಲಿದ್ದು, ಅಧ್ಯಕ್ಷತೆಯನ್ನು ಸಾಹಿತಿ ಬಿ.ಎ. ಶಂಶುದ್ದೀನ್ ಮಡಿಕೇರಿ ವಹಿಸಲಿರುವರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಆಶಯ ನುಡಿಯಲಿದ್ದಾರೆ. ಬ್ಯಾರಿ ಕವಿಗಳಾಗಿ ಎಂ.ಬಿ. ನಾಸಿರ್ ಅಹ್ಮದ್, ಎಂ. ಅಬ್ದುಲ್ಲಾ ಮಡಿಕೇರಿ, ಹುಸೈನ್ ಕಾಟಿಪಳ್ಳ, ಬಶೀರ್ ಅಹ್ಮದ್ ಕಿನ್ಯ, ಹಸನಬ್ಬ ಮೂಡಬಿದ್ರೆ, ಆಯಿಶಾ ಯು.ಕೆ, ಮರಿಯಮ್ ಇಸ್ಮಾಯಿಲ್, ಕೊಡವ ಕವಿಗಳಾಗಿ ನಾಗೇಶ್ ಕಾಲೂರು, ಫ್ಯಾನ್ಸಿ ಮುತ್ತಣ್ಣ, ತುಳು ಕವಿಗಳಾಗಿ ಶೀಲಾ, ಕಿಶೋರ್ ರೈ, ಅರೆಭಾಷೆ ಕವಿಗಳಾಗಿ ಬಿ.ಆರ್. ಜೋಯಪ್ಪ, ರೇವತಿ ರಮೇಶ್, ಕನ್ನಡ ಕವಿಗಳಾಗಿ ಕಾಜೂರು ಸತೀಶ್, ಕು| ಕೆ.ಜಿ. ರಮ್ಯಾ, ಕೊಂಕಣಿ ಕವಿಗಳಾಗಿ ವಿಲ್‍ಫ್ರೆಡ್ ಕ್ರಾಸ್ತಾ, ಚಾರ್ಲ್ಸ್ ಡಿಸೋಜಾ ಮುಂತಾದವರು ಭಾಗವಹಿಸಲಿದ್ದಾರೆ.

ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್ ಮಾಡಲಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕರಂಬಾರ್ ಮಹಮದ್ ಅಧ್ಯಕ್ಷತೆಯನ್ನು ವಹಿಸಲಿರುವರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಇವರು ಸಾಧಕರಿಗೆ ಸನ್ಮಾನ ಮಾಡಲಿರುವರು. ವಿಧಾನ ಪರಿಷತ್ ಶಾಸಕ ಬಿ.ಎಮ್. ಫಾರೂಕ್ ಇವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಿದ್ದಾರೆ.

ಮಾಜಿ ವಿಧಾನ ಪರಿಷತ್ ಸದಸ್ಯರಾದ  ಬಿ.ಎ. ಹಸನಬ್ಬ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ. ಭಂಡಾರಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪೆಮ್ಮಂಡ ಕೆ. ಪೊನ್ನಪ್ಪ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪಿ.ಸಿ. ಜಯರಾಮ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಆರ್.ಪಿ. ನಾಯ್ಕ, ಮಡಿಕೇರಿ ಬದ್ರಿಯಾ ಜಮಾಅತ್ ಅಧ್ಯಕ್ಷರಾದ ಯೂಸುಫ್, ಮಡಿಕೇರಿ ನಗರಸಭಾ ಸದಸ್ಯರಾದ ಅಮೀನ್ ಮೊಹಿಸಿನ್, ಮನ್ಸೂರ್ ಅಹ್ಮದ್, ಮೈಸೂರು ಬ್ಯಾರಿ ವೆಲ್‍ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ಎನ್. ಮೊಹಮ್ಮದ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಸಂಜೆ 6 ಗಂಟೆಗೆ ಸಮೀರ್ ಮುಲ್ಕಿ ಬಳಗದಿಂದ ಬ್ಯಾರಿ ಹಾಡು ಹಾಗೂ ಬ್ಯಾರಿ ಕವ್ವಾಲಿ, ಮುಫೀದ್ ಎಸ್. ಬಳಗದಿಂದ ಬ್ಯಾರಿ ಒಪ್ಪನೆ ಮತ್ತು ಬ್ಯಾರಿ ಕೋಲ್‍ಕಲಿ ಹಾಗೂ ಕ್ರೆಸೆಂಟ್ ವಿದ್ಯಾಸಂಸ್ಥೆ ಮಡಿಕೇರಿ ಬಳಗದಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ. ಬ್ಯಾರಿ ಭಾಷಾಭಿಮಾನಿಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group