ಶರವೂರು: ಶಾಲೆಯಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com..ಕಡಬ,ಜ.12. ಶರವೂರು ಉ.ಹಿ.ಪ್ರಾ.ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ.4ರಂದು ನಡೆಯಿತು. ಜಿ.ಪಂ. ಸದಸ್ಯರಾದ ಪ್ರಮೀಳಾ ಜನಾರ್ದನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲಂಕಾರು ಗ್ರಾ.ಪಂ. ಅಧ್ಯಕ್ಷೆ ಸುನಂದ ಬಾರ್ಕುಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ತಾರಾ ತಿಮ್ಮಪ್ಪ, ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್, ಆಲಂಕಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಸದಸ್ಯ ಕೇಶವ ಗೌಡ ಆಲಡ್ಕ, ಶರವೂರು ತುಳುನಾಡ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ನಗ್ರಿ, ಆಲಂಕಾರು ಕ್ಲಸ್ಟರ್ ಮುಖ್ಯಸ್ಥ ಪ್ರದೀಪ್ ಬಾಕಿಲ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಕೇಶವ ದೇವಾಡಿಗ ರವರು ಉಪಸ್ಥಿತರಿದ್ದರು.

Also Read  ಕಡಬ: ಕೌಟುಂಬಿಕ ಕಲಹದ ಹಿನ್ನೆಲೆ ► ಮೆಸ್ಕಾಂ ಉದ್ಯೋಗಿ ನೇಣುಬಿಗಿದು ಆತ್ಮಹತ್ಯೆ

ಶಾಲಾ ಮುಖ್ಯ ಗುರು ಶಾರಾದ ಜಿ.ಎಮ್.ವರದಿ ಮಂಡಿಸಿದರು. ಸಹಶಿಕ್ಷಕಿ ಕವಿತಾ, ಅತಿಥಿ ಶಿಕ್ಷಕಿ ಜಯಶ್ರೀಯವರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಹಶಿಕ್ಷಕ ಸಚಿನ್ ಕುಮಾರ್ ವಂದಿಸಿದರು. ರೆಜಿನಮ್ಮ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.  ಹಾಗೆಯೇ ಇದೇ ಶಾಲೆಯಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿ ಲೋಲಾಕ್ಷಿಯವರನ್ನು ಅತಿಥಿಗಳು ಸನ್ಮಾನಿಸಿ, ಗೌರವಿಸಿದರು.

error: Content is protected !!
Scroll to Top