ಸುಳ್ಯ: ಇಂದು ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ವೈಭವದ ರಥೋತ್ಸವ

(ನ್ಯೂಸ್ ಕಡಬ) newskadaba.com.ಸುಳ್ಯ,ಜ.11. ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ಪೂರ್ವಶಿಷ್ಟ ಸಂಪ್ರದಾಯ ದಂತೆ ವರ್ಷಾವಧಿ ಜಾತ್ರೆಯ ವೈಭವದ ರಥೋತ್ಸವ ಜ. 11ರಂದು ನಡೆಯಲಿದೆ. ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಗುರುವಾರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ಸಂತೆ ಮಳಿಗೆಗಳಲ್ಲೂ ಜನಸಂಖ್ಯೆ ಅಧಿಕವಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ರಥಬೀದಿಯಿಂದ ಎಪಿಎಂಸಿ ತನಕದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ಪಾದಚಾರಿ ಸಂಚಾರಕ್ಕೆ ಸೀಮಿತಗೊಳಿಸಲಾಗಿದೆ.

ಜ. 11ರ ಶುಕ್ರವಾರ ಬೆಳಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ಸಮರ್ಪಣೆ ನಡೆಯಿತು.ರಾತ್ರಿ ಕಲ್ಕುಡ ದೈವಗಳ ಭಂಡಾರ ಬಂದ ಬಳಿಕ ರಥಬೀದಿಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ರಾತ್ರಿ 12ಕ್ಕೆ ದೇಗುಲದ ಪ್ರಾಂಗಣದಿಂದ ತೇರು ಎಳೆಯುವ ಕಾರ್ಯ ಆರಂಭ ವಾಗುತ್ತದೆ. ದೇವರನ್ನು ಹೊತ್ತ ರಥ ರಥಬೀದಿ ದೇವರ ಕಟ್ಟೆ ತನಕ ಸಂಚರಿಸಿ, ಪುನಃ ದೇವಾಲಯಕ್ಕೆ ಮರಳುತ್ತದೆ. ಸಾವಿರಾರು ಭಕ್ತರು ರಥ ಎಳೆಯುವ ಕಾರ್ಯ ದಲ್ಲಿ ಕೈ ಜೋಡಿಸುತ್ತಾರೆ.

Also Read  ಕಾಜರೊಕ್ಕು- ಶ್ರೀ ರಾಮಕುಂಜೇಶ್ವರ ದೇವಸ್ಥಾನ ಕಾಂಕ್ರಿಟೀಕರಣ ಗುದ್ದಲಿಪೂಜೆ

ಸುರಕ್ಷತೆಯ ದೃಷ್ಟಿಯಿಂದ ಮುಖ್ಯ ರಸ್ತೆಯಿಂದ ರಥಬೀದಿ ಸಂಪರ್ಕ ರಸ್ತೆ ಯನ್ನು ಎಪಿಎಂಸಿ ತನಕ ವಾಹನ ಸಂಚಾ ರಕ್ಕೆ ಅವಕಾಶ ಇರುವುದಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಸಂತೆ ಮಾರುಕಟ್ಟೆ ಇದ್ದು, ಜನಜಂಗುಳಿ ತುಂಬಿರುತ್ತದೆ. ಜತೆಗೆ ರಥ ಸಂಚಾರವೂ ಇದೇ ರಸ್ತೆಯಲ್ಲಿ ಸಾಗುವ ಕಾರಣ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿಲ್ಲ.ತಾಲೂಕು ಹಾಗೂ ಹೊರ ಜಿಲ್ಲೆಗ ಳಿಂದ ಆಗಮಿಸುವ ಭಕ್ತರು, ಮುಖ್ಯ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಬೈಕ್‌ ಹೊರತು ಪಡಿಸಿ ಉಳಿದ ವಾಹನಗಳನ್ನು ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ಎಂದು ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.

Also Read  ಮಾಜಿ ಸೈನಿಕರಿಗೆ ಜೈ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

 

error: Content is protected !!
Scroll to Top