(ನ್ಯೂಸ್ ಕಡಬ) newskadaba.com.ಮಂಗಳೂರು,ಜ.11. ಸುಳ್ಯ ಶ್ರೀ ಚೆನ್ನಕೇಶವ ದೇವರ ವರ್ಷಾವಧಿ ಜಾತ್ರೋತ್ಸವವು ಜನವರಿ 13ರವರೆಗೆ ನಡೆಯಲಿದೆ. ಈ ಸಮಯ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು, ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಕಾಪಾಡುವ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಬಾರ್ ಮತ್ತು ರೆಸ್ಟೋರೆಂಟ್ ಮತ್ತು ವೈನ್‍ಶಾಪ್, ಮದ್ಯ ಮಾರಾಟ ಕೇಂದ್ರಗಳನ್ನು ಜನವರಿ 10 ರಂದು ಮಧ್ಯರಾತ್ರಿ 12 ಗಂಟೆಯಿಂದ ಜನವರಿ 13 ರಂದು ಬೆಳಿಗ್ಗೆ 6 ಗಂಟೆವರೆಗೆ ಮುಚ್ಚಲು ಆದೇಶಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದ್ ಮಾಡಬೇಕಾದ ಮದ್ಯದಂಗಡಿಗಳು ಯಾವುವು : ಪ್ರಕಾಶ್ ವೈನ್ಸ್, ವಿಖ್ಯಾವೈನ್ಸ್, ಜನಪ್ರಿಯ ಬಾರ್, ಸನ್ನಿದಿ ಬಾರ್, ಪ್ರಶಾಂತ್ ವೈನ್ಸ್, ಕವಿತಾ ವೈನ್ಸ್, ರಾಮಬಾರ್, ಪ್ರಶಾಂತ್ ಬಾರ್, ಹಿಲ್ ಸೈಡ್ ಬಾರ್, ಸಂತೋಷ್ ವೈನ್ಸ್, ಮಾತ್ರ ಮುಚ್ಚಿರುತ್ತದೆ. ಉಳಿದಂತೆ ಎಲ್ಲಾ ಮದ್ಯದಂಗಡಿಗಳು ತೆರೆದಿರುತ್ತದೆ.