ವಿಕಲಚೇತನ ಫಲಾನುಭವಿಗಳಿಗೆ ಆಧಾರ್ ಯೋಜನೆಯಡಿ ► ಸಬ್ಸಿಡಿ ಸಹಿತ ಸಾಲ ಸೌಲಭ್ಯ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.10. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಿಂದ 2018-19ನೇ ಸಾಲಿಗೆ ಜಿಲ್ಲೆಯ ವಿಕಲಚೇತನ ಫಲಾನುಭವಿಗಳಿಂದ ‘ಆಧಾರ್’ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.  ಅರ್ಹ ವಿಕಲಚೇತನರು ಅರ್ಜಿಯನ್ನು ಇಲಾಖೆಯಿಂದ ಕಚೇರಿ ವೇಳೆಯಲ್ಲಿ ಪಡೆದು ಜನವರಿ 25 ರೊಳಗಾಗಿ ಸಲ್ಲಿಸಬೇಕು.  ಷರತ್ತುಗಳು: ಅರ್ಜಿ ಸಲ್ಲಿಸುವ ವಿಕಲಚೇತನರು ಫಲಾನುಭವಿಯು ಶೇ.40 ಅಥವಾ ಅದಕ್ಕಿಂತ ಹೆಚ್ಚು ಅಂಗವಿಕಲತೆ ಇದ್ದು 18 ರಿಂದ 55 ವರ್ಷ ವಯಸ್ಸಿನೊಳಗಿನ ನಿರುದ್ಯೋಗಿಯಾಗಿರಬೇಕು ಹಾಗೂ ಕನಿಷ್ಠ ಕಳೆದ ಹತ್ತು ವರ್ಷಗಳಿಂದ ಕರ್ನಾಟಕರಾಜ್ಯದಲ್ಲಿ ವಾಸವಿರುವ ಬಗ್ಗೆ ತಹಸೀಲ್ದಾರ್‍ರವರಿಂದ ಧೃಢೀಕರಣ ಸಲ್ಲಿಸಬೇಕು. ಗ್ರಾಮೀಣ ಪ್ರದೇಶದವರಿಗೆ ರೂ.11,500/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ.24,000/-ಗಳನ್ನು ಮೀರಿರಬಾರದು.

ಯೋಜನೆಯು ರೂ.1,00,00 ಗಳಾಗಿದ್ದು, ಶೇ.50% ರಷ್ಟು ಸಬ್ಸಿಡಿ ಮತ್ತು ಇನ್ನುಳಿದ ಶೇ.50% ರಷ್ಟು ಅಂದರೆ ರೂ.50,000/- ಗಳನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳ ಜೊತೆಗೆ ಜಿಲ್ಲಾ ಪತ್ತಿನ ಸಹಕಾರ ಬ್ಯಾಂಕ್ ಮತ್ತು ಮಹಿಳಾ ಸಹಕಾರ ಬ್ಯಾಂಕುಗಳ ಮೂಲಕ ಸಾಲವನ್ನು ಒದಗಿಸುವುದಾಗಿ ಅನುಮೋದಿತ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2458173 ಅಥವಾ ನೇರವಾಗಿ ಕಚೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  Big Breaking News ಪೇಜಾವರ ಶ್ರೀ ನಿಧನ

error: Content is protected !!
Scroll to Top