ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ – ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.10.  ಭಾರತ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ಅಥವಾ ಮಕ್ಕಳ ವಿರುದ್ಧ ಅಪಾದನೆಗಳ ತ್ವರಿತ ವಿಲೇವಾರಿಗೆ ಮಕ್ಕಳ ನ್ಯಾಯಾಲಯವನ್ನು ಸ್ಥಾಪಿಸಲು ಮಕ್ಕಳ ಹಕ್ಕುಗಳ  ರಕ್ಷಣೆಯ ಅಧಿನಿಯಮ-20055ನ್ನು ಜಾರಿಗೆ ತಂದಿದ್ದು, ಪ್ರಕರಣ 17(1)ರಂತೆ ದಿನಾಂಕ:27-9-2007ರ ಸರ್ಕಾರಿ ಆದೇಶದನ್ವಯ ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗವನ್ನು ಕರ್ನಾಟಕ ಸರ್ಕಾರವು ಸ್ಥಾಪಿಸಿದ್ದು ಸದರಿ ಆಯೋಗಕ್ಕೆ ಆರು ಸದಸ್ಯರನ್ನು (ಇಬ್ಬರು ಮಹಿಳಾ ಸದಸ್ಯರನ್ನು ಒಳಗೊಂಡಂತೆ) ರಾಜ್ಯ ಸರ್ಕಾರವು ನೇಮಿಸಬೇಕಾಗಿರುತ್ತದೆ.  ಸದಸ್ಯರ ಅವಧಿಯು 3 ವರ್ಷದ್ದಾಗಿದ್ದು, ಸದಸ್ಯ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 57 ವರ್ಷದೊಳಗಿರಬೇಕು.
ಶಿಕ್ಷಣ,  ಮಕ್ಕಳ ಆರೋಗ್ಯ ರಕ್ಷಣೆ, ಮಕ್ಕಳ ಕಲ್ಯಾಣ ಅಥವಾ ಮಕ್ಕಳ ಅಭಿವೃದ್ದಿ, ಬಾಲನ್ಯಾಯ ಅಥವಾ ನಿರ್ಲಕ್ಷಿಸಲ್ಪಟ್ಟ ಮಕ್ಕಳ ರಕ್ಷಣೆ ಅಥವಾ ಸೌಲಭ್ಯ ವಂಚಿತ ಕಟ್ಟಕಡೆಯ ಮಕ್ಕಳು ಅಥವಾ ವಿಕಲಚೇತನ ಮಕ್ಕಳು, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಅಥವಾ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಮಕ್ಕಳು, ಮಕ್ಕಳ ಮನಃಶಾಸ್ತ್ರ ಅಥವಾ ಸಮಾಜ ಶಾಸ್ತ್ರ, ಮಕ್ಕಳ ಕಾನೂನುಗಳು  ಈ ಕ್ಷೇತ್ರಗಳಲ್ಲಿ ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು.ಆಸಕ್ತರು ನಿಗಧಿತ ನಮೂನೆಯನ್ನು ಭರ್ತಿ ಮಾಡಿ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಇಲಾಖಾ ನಿರ್ದೇಶಕರಿಗೆ ಸಲ್ಲಿಸಬಹುದಾಗಿರುತ್ತದೆ. (ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿ ಇಲಾಖೆಯ website http://www.dwcd.kar.nic.in ನಲ್ಲಿ ಎಂದು ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಇವರ ಪ್ರಕಟಣೆ ತಿಳಿಸಿದೆ.
error: Content is protected !!
Scroll to Top