ಜನವರಿ 17,18,19  ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.10. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಸಂಸ್ಥೆಗಳಾದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರು ಯುವ ಕೇಂದ್ರ ಸಂಘಟನೆಯ ಆಶ್ರಯದಲ್ಲಿ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆಯನ್ನು ಆಯೋಜಿಸಿದೆ. ಜನವರಿ 17,18,19 ರಂದು ದಕ್ಷಿಣ ಕನ್ನಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸುತ್ತಿನ ಸ್ಪರ್ಧೆಯನ್ನು ಸಂತ ಆಗ್ನೇಸ್ ಕಾಲೇಜ್ ಬೆಂದೂರು ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

ಸ್ಪರ್ಧೆಯು ಎರಡು ವಿಧದಲ್ಲಿ ನಡೆಯಲಿದೆ. ಆಯ್ದ ವಿಷಯಗಳ ಬಗ್ಗೆ ಎರಡು ಮೂರು ನಿಮಿಷ ಕನ್ನಡ/ಇಂಗ್ಲಿಷ್/ಹಿಂದಿ ಭಾಷೆಯಲ್ಲಿ ಮಾತನಾಡಬೇಕು ಹಾಗೂ ತಮ್ಮದೇ ಭಾಷಣದ ವಿಡಿಯೋ ಪ್ರತಿಯನ್ನು  my govt.in gov ರಲ್ಲಿ ಜನವರಿ 19ರೊಳಗೆ ನೊಂದಯಿಸಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು 18 ರಿಂದ 25 ವರ್ಷ ವಯೋಮಾನದವರಾಗಿರಬೇಕು. ವಿದ್ಯಾರ್ಥಿ ಸ್ಪರ್ಧಾಳುಗಳು ನೋಂದಾವಣಿ ಹಾಗೂ ಇತರ ಮಾಹಿತಿಗಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಹಾಗೂ ವಿದ್ಯಾರ್ಥಿಯೇತರ ಸ್ಪರ್ಧಾಳುಗಳು ಜಿಲ್ಲಾ ಯುವ ಸಮನ್ವಯ ಅಧಿಕಾರಿ, ಜಿಲ್ಲಾಧಿಕಾರಿ ಆವರಣ, ಕಂದಾಯಭವನ ಮಂಗಳೂರು 8762114493/0824-2422264 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

error: Content is protected !!
Scroll to Top