ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ►ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿ ಬದುಕಿಗೆ ಪ್ರೇರಣೆ – ಬಾಲಕೃಷ್ಣ ಬಳ್ಳೇರಿ

(ನ್ಯೂಸ್ ಕಡಬ) newskadaba.com.ಕಡಬ,ಜ.09. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರನ್ನು ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿ ಆರ್ಥಿಕ ಭದ್ರತೆಯನ್ನು ನೀಡುತ್ತಿದೆ, ಇದು ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಹೇಳಿದರು.ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕಡಬ ಗ್ರಾಮದ ಎ ಮತ್ತು ಬಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮಾಭಿವೃದ್ಧಿ ಯೋಜನೆ ಜಾರಿಯಾದ ಬಳಿಕ ಗ್ರಾಮೀಣ ಭಾಗಗಳಲ್ಲಿ ದುಡಿಯದೇ ಸಮಯ ಕಳೆಯುತ್ತಿದ್ದವರು ದುಡಿದು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಮನೆಗಳು ದುಶ್ಚಟ ಮುಕ್ತವಾಗಿದೆ. ಜಾತಿ ಧರ್ಮದ ಕಟ್ಟುಪಾಡುಗಳಿಲ್ಲದೇ ಪ್ರತಿಯೊಬ್ಬರೂ ಅರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡು ಅಭಿವೃದ್ಧಿಹೊಂದಬೇಕೆನ್ನುವ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಕನಸು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನನಸಾಗುತ್ತಿದೆ ಎಂದರು.

ಕಡಬ ಮದ್ಯವರ್ಜನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಜಯರಾಜ್ ಶೆಟ್ಟಿ ಹಾಗೂ ಪುತ್ತೂರು ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ ಮುಖ್ಯಅತಿಥಿಗಳಾಗಿ ಮಾತನಾಡಿದರು. . ಕಡಬ ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಅಲುಂಗೂರು, ಕಡಬ ಸರಕಾರಿ ಮಾದರಿ ಹಿ.ಪ್ರಾ.ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣ ಬಿ. ಅತಿಥಿಗಳಾಗಿ ಭಾಗವಹಿಸಿದ್ದರು. ಎ ಒಕ್ಕೂಟದ ನಿರ್ಗಮನ ಅಧ್ಯಕ್ಷ ಬಾಲಚಂದ್ರ, ಉಪಾಧ್ಯಕ್ಷ ರಾಜೀವಿ, ಕಾರ್ಯದರ್ಶಿ ದಯಾನಂದ ರೈ, ಜತೆ ಕಾರ್ಯದರ್ಶಿ ಮೋಹಿನಿ, ಕೋಶಾಧಿಕಾರಿ ಲಕ್ಷ್ಮೀಶ ಬಂಗೇರ, ನೂತನ ಅಧ್ಯಕ್ಷ ಸೀತಾ ಚಂದ್ರನ್, ಉಪಾಧ್ಯಕ್ಷಕ್ಷೆ ಮೋಹಿನಿ, ಕಾರ್ಯದರ್ಶಿ ದಯಾನಂದ ರೈ, ಜತೆ ಕಾರ್ಯದರ್ಶಿ ಸೋಮಯ್ಯ, ಕೋಶಾಧಿಕಾರಿ ರವಿನಾಥ ಶೆಟ್ಟಿ, ಬಿ ಒಕ್ಕೂಟದ ನಿರ್ಗಮನ ಅಧ್ಯಕ್ಷ ಆನಂದ ಗೌಡ ಕೋಂಕ್ಯಾಡಿ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಪಿ.ಟಿ., ಕಾರ್ಯದರ್ಶಿ ನಳಿನಾಕ್ಷಿ ಎ., ಜತೆ ಕಾರ್ಯದರ್ಶಿ ಪ್ರಭಾಕರ ಕೆ.ಎಸ್., ಕೋಶಾಧಿಕಾರಿ ದಯಾನಂದ ಪಿ., ನೂತನ ಅಧ್ಯಕ್ಷ ಕೊರಗಪ್ಪ ಗೌಡ, ಉಪಾಧ್ಯಕ್ಷ ನಾರಾಯಣ ಗೌಡ, ಕಾರ್ಯದರ್ಶಿ ನಾಗವೇಣಿ, ಜತೆ ಕಾರ್ಯದರ್ಶಿ ಹರೀಶ್ ಗೌಡ ಹಾಗೂ ಕೋಶಾಧಿಕಾರಿ ಗೀತಾ ಉಪಸ್ಥಿತರಿದ್ದರು. ನಿರ್ಗಮನ ಪದಾಧಿಕಾರಿಗಳು ದಾಖಲಾತಿಗಳನ್ನು ಹಸ್ತಾಂತರಿಸುವ ಮೂಲಕ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು.

Also Read  ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ

ಯೋಜನೆಯ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಿದ ಕಡಬ ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಅಲುಂಗೂರು, ಕಡಬ ಸರಕಾರಿ ಮಾದರಿ ಹಿ.ಪ್ರಾ.ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣ ಬಿ., ಸೇವಾ ಪ್ರತಿನಿಧಿಗಳಾಗಿ ಕಡಬ ಗ್ರಾಮದಲ್ಲಿ ಕಾರ್ಯನಿರ್ವಹಿದ್ದ ಸುಗುಣ, ನಳಿನಿ ಹಾಗೂ ಪುಷ್ಟಾ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಜಿಲ್ಲಾಮಟ್ಟದ ಅತ್ಯುತ್ತಮ ಮಹಿಳಾ ಸಂಘ ಪ್ರಶಸ್ತಿ ಪಡೆದ ಕಳಾರದ ಶ್ರೀದುರ್ಗಾ ಸ್ವಸಹಾಯ ಸಂಘ ಹಾಗೂ ಮಾದರಿ ಜ್ಞಾನ ವಿಕಾಸ ಕೇಂದ್ರ ಪ್ರಶಸ್ತಿ ಪಡೆದ ಸಾಧನಾಜ್ಕಾಞಸ ಕೇಂದ್ರದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತುವಿಮಲಾ ರೈ ಹಾಗೂ ಪ್ರೇಮಲತಾ ಜೆ. ರೈ ಅನಿಸಿಕೆ ವ್ಯಕ್ತಪಡಿಸಿದರು. ದಯಾನಂದ ರೈ ವರದಿ ವಾಚಿಸಿದರು. ಗ್ರಾಮಾಭಿವೃದ್ಧಿ ಸೇವಾಪ್ರತಿನಿಧಿ ಜಯಲಕ್ಷ್ಮೀ ಬೆದ್ರಾಜೆ ಸ್ವಾಗತಿಸಿದರು. ಸವಿತಾ ಪಿ. ವಂದಿಸಿದರು. ಕಡಬ ವಲಯ ಮೇಲ್ವಿಚಾರಕ ಬಾಬು ಕಾರ್ಯಕ್ರಮ ನಿರೂಪಿಸಿದರು.

Also Read  ಶಾಸಕ ಮುನಿರತ್ನರ ಮೇಲೆ ಮೊಟ್ಟೆ ಎಸೆತ ಪ್ರಕರಣ; ಎಫ್ಐಆರ್ ದಾಖಲು

error: Content is protected !!
Scroll to Top