ಕುಟ್ರುಪಾಡಿ: ಹಾ.ಉ.ಸ.ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ►ಅಧ್ಯಕ್ಷರಾಗಿ 3ನೇ ಬಾರಿಗೆ ಕಿರಣ್ ಗೋಗಟೆ, ಉಪಾಧ್ಯಕ್ಷರಾಗಿ ವಿಶ್ವನಾಥ ರೈ ಆರ್ತಿಲ

(ನ್ಯೂಸ್ ಕಡಬ) newskadaba.com.ಕುಟ್ರುಪಾಡಿ,ಜ.09.  ಕುಟ್ರುಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಘದ ಕಚೇರಿಯಲ್ಲಿ ಜ.6ರಂದು ನಡೆಯಿತು. ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿದೆ.ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಕಿರಣ್ ಗೋಗಟೆ, ಉಪಾಧ್ಯಕ್ಷರಾಗಿ ವಿಶ್ವನಾಥ ರೈ ಆರ್ತಿಲ ಮರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇವರೀರ್ವರೇ ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ನಡೆದಿದೆ. ರಿಟರ್ನಿಂಗ್ ಅಧಿಕಾರಿ ಆನಂದ ಎ. ರವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟು, ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕಿರಣ್ ಗೋಗಟೆ ಮಾತನಾಡಿ ನನ್ನನ್ನು ಸತತ ಮೂರನೇ ಬಾರಿಗೂ ತಾವೆಲ್ಲ ನಿರ್ದೇಶಕರು ಒಮ್ಮತ ಅಭಿಪ್ರಾಯದಿಂದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದೀರಿ, ತಮ್ಮ ಸಹಕಾರಕ್ಕೆ ನಾನು ಸದಾ ಅಭಾರಿಯಾಗಿದ್ದೇನೆ, ಈ ಹಾ.ಉ.ಸಂಘದಲ್ಲಿ ನಾನು ಸೇರಿದಂತೆ ತಮ್ಮೆಲ್ಲರ ಸಹಕಾರದಿಂದ ನಮ್ಮ ಸಂಘ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ. ಈ ಹಿಂದೆ ನಿರ್ದೇಶಕರಾದವರಿಗೆ ಸಂಘದ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೂ ಹೊಸದಾಗಿ ಆಯ್ಕೆಯಾಗಿರುವ ನೂತನ ನಿರ್ದೇಶಕರಿಗೆ ಸಂಘದ ಅಭಿವೃದ್ಧಿ ಬಗ್ಗೆ ಸಮಗ್ರ ಮಾಹಿತಿ ನೀಡುವುದರೊಂದಿಗೆ ಸಂಘದಲ್ಲಿ ಪಾರದರ್ಶಕವಾದ ಹಾಲು ಹಾಕುವರೇ, ಮತ್ತು ಸಂಘದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು, ಸಭೆ, ಸಮಾರಂಭಗಳಿಗೆ ತಮ್ಮೆಲ್ಲರ ಸಹಕಾರ ಅತೀ ಅಗತ್ಯವಾಗಿದೆ ಎಂದು ಹೇಳಿದ ಅವರು ಇನ್ನೂ ಹಲವಾರು ಮಂದಿ ನಮ್ಮ ಸಂಘಕ್ಕೆ ಹಾಲು ಹಾಕುವಂತೆ ಮತ್ತು ಹೈನುಗಾರಿಕೆ ನಡೆಸುವಂತೆ ನಾವೆಲ್ಲರೂ ಪ್ರಯತ್ನಿಸೋಣ ಎಂದರು. ನಮ್ಮ ಈ ವರ್ಷದ ಸಂಘದ ಚುನಾವಣೆ ಬಹಳ ಅಚ್ಚುಕಟ್ಟಾಗಿ ನಡೆದಿದ್ದು, ನಮಗೆಲ್ಲ ನಿರ್ದೇಶಕರಿಗೆ ಪ್ರಮಾಣ ಪತ್ರ ನೀಡಲಾಗಿದೆ. ಇದಕ್ಕೆಲ್ಲ ನಮ್ಮಚುನಾವಣಾಧಿಕಾರಿಯಾಗಿರುವ ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆನಂದ ಎ. ರವರ ಪ್ರಾಮಾಣಿಕ ಸೇವೆಯೇ ಸಾಕ್ಷಿಯಾಗಿದ್ದು ಅವರಿಗೆ ನಮ್ಮ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ನಮ್ಮ ಕಾರ್ಯದರ್ಶಿ ಕೊರಗಪ್ಪ ರವರು ಕೂಡಾ ಉತ್ತಮ ಕರ್ತವ್ಯನಿಷ್ಠೆ ಕೆಲಸಗಾರನಾಗಿದ್ದು, ನಮ್ಮ ಸಂಘ ಯಶಸ್ವಿ ಪಥದಲ್ಲಿ ಸಾಗಲು ಸಹಕಾರಿಯಾಗಿದೆ ಎಂದರು.

Also Read  ಮಂಗಳೂರು : ಜಲಾವೃತ ಪ್ರದೇಶಗಳಿಗೆ ದ.ಕ ಜಿಲ್ಲಾಧಿಕಾರಿ ಭೇಟಿ.

ಕುಟ್ರುಪಾಡಿ ಪ್ರಾ.ಕೃ.ಪತ್ತಿನ ಸ.ಸಂಘದ ಅಧ್ಯಕ್ಷರೂ, ಕುಟ್ರುಪಾಡಿ ಹಾಲು ಉತ್ಪಾದಕರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಗತಿಪರ ಕೃಷಿಕರಾದ ಕರುಣಾಕರ ಗೋಗಟೆಯವರು ಮಾತನಾಡಿ ದೇಶಾಧ್ಯಂತಸ್ವಚ್ಚತೆಯಲ್ಲಿರುವ ನಾವು ನಮ್ಮ ಪರಿಸರ, ಸಂಘ-ಸಂಸ್ಥೆಗಳು, ಶಾಲಾ ಕಾಲೇಜುಗಳ, ಅಂಗನವಾಡಿ ಕೇಂದ್ರಗಳನ್ನು ಸ್ವಚ್ಚವಾಗಿಡುವುದಲ್ಲದೇ ನಿರಂತರ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದ ಅವರು ಒಬ್ಬ ಪ್ರಾಮಾಣಿಕ ದಕ್ಷ, ನಿಷ್ಪಕ್ಷಪಾತ ವ್ಯಕ್ತಿಯಾಗಿದ್ದು ಎಲ್ಲರನ್ನೂ ಅನ್ಯೋನ್ಯತೆಯಿಂದ ಒಟ್ಟಾಗಿ ಕಾರ್ಯವೆಸಗಿದರೆ ಅವರನ್ನು ಎಲ್ಲರೂ ಬೆಂಬಲಿಸುವುದು ಸಹಜವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹಾಲು ಸೊಸೈಟಿಯ ಅಧ್ಯಕ್ಷ ಕಿರಣ್ ಗೋಗಟೆ, ಉಪಾಧ್ಯಕ್ಷ ವಿಶ್ವನಾಥ ರೈ ಆರ್ತಿಲ ರವರು ಇಲ್ಲಿಯ ಹೈನುಗಾರಿಕೆಯ ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡಿದ್ದೇ ಇಂದು ಅವರ ಅವಿರೋಧ ಆಯ್ಕೆಗೆ ಸಾಕ್ಷಿಯಾಗಿದೆ ಎಂದು ಹೇಳಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಮೋನಪ್ಪ ಗೌಡ ನಾಡೋಳಿ, ವೆಂಕಟೇಶ್ ಆರಿಗ, ಟಿ.ಎಂ.ಕ್ಸೇವಿಯರ್ ಉಳಿಪು, ಬಾಬಿ ಪೂಜಾರಿ ಬಲ್ಯ, ಜಯಪ್ರಕಾಶ ಡಿ. ದೋಳ, ಪದ್ಮನಾಭ ನಾಯ್ಕ, ನಾಗಪ್ಪ ರಾಣ್ಯ ನಾಡೋಳಿ,ಧರ್ಮಾವತಿ ಹೊಸಮಠ, ಲಲಿತ ಸಂಪಡ್ಕ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕೊರಗಪ್ಪ ಗೌಡ ಸ್ವಾಗತಿಸಿ, ಹಾಲು ಪರೀಕ್ಷಕಿ ಲೀಲಾವತಿ ವಂದಿಸಿದರು.

Also Read  SSLC ಫಲಿತಾಂಶ ಪ್ರಕಟ !!! ➤ ಚಿತ್ರದುರ್ಗ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡಕ್ಕೆ 19ನೇ ಸ್ಥಾನ

 

 

error: Content is protected !!
Scroll to Top