ಫೆಬ್ರವರಿ 1 ಮತ್ತು 2ರಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಮ್ಮೇಳನ ► ಸಂಶೋಧನಾ ಪ್ರಾತ್ಯಕ್ಷಿಗಳಿಗಳಿಗೆ ನಗದು ಬಹುಮಾನ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.09. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಹನ್ನೊಂದನೆ ಪ್ರಧಾನ ಸಮ್ಮೇಳನವನ್ನು ಸಮಾಜ ಒಳಿತಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆಯಾಮಗಳು ಎಂಬ ಕೇಂದ್ರ ವಿಷಯದಡಿ, ಬೆಂಗಳೂರಿನ ಜಯನಗರದಲ್ಲಿರುವ ಎನ್.ಎಂ.ಕೆ.ಆರ್ ಕಾಲೇಜಿನ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಫೆಬ್ರವರಿ 1 ಮತ್ತು 2ರಂದು ಆಯೋಜಿಸಿದೆ.ಸಮ್ಮೆಳನದಲ್ಲಿ ಪ್ರತಿನಿಧಿಗಳು ಭೌತ ಮತ್ತು ಗಣಿತ ವಿಜ್ಞಾನ, ರಸಾಯನ ಮತ್ತು ಜೀವ ವಿಜ್ಞಾನ, ಇಂಜಿನಿಯರಿಂಗ್ ಹಾಗೂ ಅಂತರ್ ಶಾಸ್ತ್ರೀಯ ವಿಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಾತ್ಯಕ್ಷಿಗಳಿಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ತಜ್ಞ ಸಮಿತಿಯು ಆಯ್ಕೆ ಮಾಡಿದ ಪ್ರಾತ್ಯಕ್ಷಿಗಳಿಗೆ ನಗದು ಬಹುಮಾನ ನೀಡಲಾಗುವುದು.
ಪ್ರಥಮ ಬಹುಮಾನ ರೂ. 15000, ದ್ವಿತೀಯ ರೂ. 10000, ಹಾಗೂ  2 ಸಮಾಧಾನಕರ ಬಹುಮಾನಗಳನ್ನು ತಲಾ ರೂ. 5000/. ಆಸಕ್ತರು ಅರ್ಜಿಯನ್ನು ಇಮೇಲ್ ಮೂಲಕ ಕಳುಹಿಸಬಹುದಾಗಿದೆ. . nmkrv.ksta19@gmail.com ಅಥವಾ ಹೆಚ್ಚಿನ ವಿವರಗಳಿಗೆ ಅಕಾಡೆಮಿ ಅಥವಾ ಸಮ್ಮೇಳನದ ವೆಬ್‍ಸೈಟ್ www.kstacademy.in/www.kstaconference.com ನಿಂದ ಮಾಹಿತಿ ಪಡೆಯಬಹುದಾಗಿದೆ.ಸಮ್ಮೆಳನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ವಿಜ್ಞಾನಿ ಹಾಗೂ ಮುಂಬೈನಲ್ಲಿರುವ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ. ಬಿ.ವಿ. ಶ್ರೀಕಂಠನ್‍ರವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪುರಸ್ಕøತರಿಗೆ ರೂ.100000/, ಚಿನ್ನದಪದಕ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ ರಮೇಶ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇವರ ಪ್ರಕಟಣೆ ತಿಳಿಸಿದೆ.
error: Content is protected !!
Scroll to Top