ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳ ಕಳ್ಳತನ► ಸಾರ್ವಜನಿಕರ ಸಹಾಯದಿಂದ ಆರೋಪಿಗಳ ಬಂಧನ


(ನ್ಯೂಸ್ ಕಡಬ)newskadaba.comಪುತ್ತೂರು, ಜ.7.ಆರ್ಲಪದವಿನಲ್ಲಿ ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳನ್ನು ಕಳವುಗೈದವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಉಪ್ಪಿನಂಗಡಿ ಬೇಜಾರು ನಿವಾಸಿ ರಿಯಾಝ್, ನೆಕ್ಕಿಲಾಡಿಯ ಸಿರಾಜು ದ್ದೀನ್‌, ಬಂಧಿತರು.

 

ಆರ್ಲಪದವಿನಲ್ಲಿ ಮನೆಗೆ ಹೊಂದಿಕೊಂಡಿರುವ ಅಶ್ರಫ್‌  ಅವರ ಗೂಡಂಗಡಿಯಿಂದ 5 ಸಾವಿರ ಹಾಗೂ ಮೊಬೈಲ್‌ ಫೋನ್‌  ಅನ್ನು ಇವರು ಕಳವು ಮಾಡಿದ್ದರು. ಕಳ್ಳತನ ಅರಿವಿಗೆ ಬಂದ ತತ್‌ಕ್ಷಣ ಅಶ್ರಫ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಸಹಕಾರದಿಂದ ಆರ್ಲಪದವು ಚೆಕ್‌ ಪೋಸ್ಟ್‌ ಬಳಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರಿಂದ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುತ್ತೂರು ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಿಜೆಪಿ ಗ್ರಾಮ ಸಮಿತಿ ಸಭೆ ►ಎನ್.ಡಿ.ಎ ಸರಕಾರದ ಜನಪರ ಯೋಜನೆಗಳು ಪ್ರತಿ ಮನೆಗೂ ತಿಳಿದಿರಬೇಕು

error: Content is protected !!
Scroll to Top