(ನ್ಯೂಸ್ ಕಡಬ)newskadaba.com.ಬೆಂಗಳೂರು,ಜ.7. ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆನೀಡಿವೆ. ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ.
ಯಾವ ಯಾವ ಸೌಲಭ್ಯಗಳಿಗೆ ಬಂದ್ ಇರುವುದಿಲ್ಲ: ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲಸಾರ್ವಜನಿಕರಿಗೆ ದೈನಂದಿನಂತೆ ವ್ಯವಹಾರ ನಡೆಯುತ್ತದೆ.
ಯಾವ ಯಾವ ಕಾರಣಕ್ಕೆ ಬಂದ್ : ಸಾಮಾಜಿಕ ಸುರಕ್ಷೆ * ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಬಂದ್ ನಡೆಯುತ್ತಿದೆ. ಜನವರಿ 8 ಮತ್ತು 9ರಂದು ಕೆಎಸ್ಆರ್‌ಟಿಸಿ ನೌಕರರ ಮುಷ್ಕರ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಗೆ ವಿರೋಧ * ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಮಸೂದೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ರೂ.100ರಿಂದ ಕನಿಷ್ಠ ರೂ.500 ಹಾಗೂ ಗರಿಷ್ಠ 500, ಅತಿವೇಗಕ್ಕೆ ರೂ.400 ರಿಂದ ರೂ.1000, ನಿರ್ಲಕ್ಷ್ಯದ ಚಾಲನೆಗೆ ರೂ.1000 ರಿಂದ ರೂ.5000 ಹೆಚ್ಚಿಸಲಾಗಿದೆ ಇದನ್ನು ವಿರೋಧಿಸಿ ಬಂದ್ ನಡೆಯಗುತ್ತಿದೆ. ಜನವರಿ 8, 9 ರಂದು ಆಟೋ ಮುಷ್ಕರ, ಸಂಚಾರ ಸ್ಥಗಿತ? ಆಂಬುಲೆನ್ಸ್ ಗೆ ದಾರಿ ಬಿಡದಿದ್ದರೆ 10,000 ರೂ ದಂಡ! *ಆಂಬುಲೆನ್ಸ್ ಗೆ ದಾರಿ ಬಿಡದಿರುವುದಕ್ಕೆ ರೂ.10 ಸಾವಿರ ದಂಡ ಮತ್ತು 6 ತಿಂಗಳ ಜೈಲು ವಿಧಿಸಲಾಗುತ್ತದೆ. ವಿಮೆ ಇಲ್ಲದೆ ಚಾಲನೆಗೆ ರೂ.2 ಸಾವಿರ ದಂಡ ಮತ್ತು ಆರು ತಿಂಗಳ ಜೈಲು ವಿಧಿಸಲಾಗುತ್ತದೆ ಇದಕ್ಕೆ ಮುಷ್ಕರನಿರತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಎಐಟಿಯುಸಿ, ಸಿಐಟಿಯು, ಐಎನ್ ಟಿಯುಸಿ, ಎಲ್‌ಪಿಎಫ್ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ರಾಷ್ಟ್ರವ್ಯಾಪ್ತಿ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಂಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೂ ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿದ್ದು, ಉಬರ್ ಮತ್ತು ಓಲಾ ಕ್ಯಾಬ್ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ.