ಶತಾಯುಷಿ ಕೆಮ್ಮಾರ ಇಸ್ಮಾಯಿಲ್ ಹಾಜಿ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಜ.07. ಹಲವಾರು ದಶಕಗಳ ಕಾಲ ಕೆಮ್ಮಾರ ಮುಹಿಯದ್ದೀನ್ ಜುಮಾ ಮಸ್ಜಿದ್ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಕೆಮ್ಮಾರ ಇಸ್ಮಾಯಿಲ್ ಹಾಜಿ(107) ಸೋಮವಾರ ಬೆಳಗ್ಗಿನ ಜಾವ ತನ್ನ ಸ್ವಗೃಹದಲ್ಲಿ ನಿಧನರಾದರು.

ವಯೋಸಹಜ ರೋಗದಿಂದ ಬಳಲುತ್ತಿದ್ದ ಅವರು, ಸಕಲೇಶಪುರದಲ್ಲಿ ಟಿಂಬರ್ ಮರ್ಚೆಂಟ್ ಉದ್ಯಮ ನಡೆಸುತ್ತಿದ್ದರು. ತದನಂತರದ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ಪ್ರಗತಿಪರ ಕೃಷಿಕರಾಗಿ ಹಲವಾರು ಕೂಲಿ ಕಾರ್ಮಿಕ ಜೀವನಕ್ಕೆ ಸಹಕಾರಿಯಾಗಿದ್ದರು. ಮೃತರು ತನ್ನ ಕುಟುಂಬದ ಐದು ತಲೆಮಾರುಗಳನ್ನು ಒಳಗೊಂಡಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Also Read  ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ - ಮೂವರು ವಿದ್ಯಾರ್ಥಿನಿಯರ ವಿರುದ್ದ ಎಫ್ಐಆರ್ ದಾಖಲು

error: Content is protected !!
Scroll to Top