ಇಚ್ಲಂಪಾಡಿ: ಶಬರಿಮಲೆ ಪಾವಿತ್ರ್ಯತೆ ಉಳಿಸಿ ಮೆರವಣಿಗೆ

(ನ್ಯೂಸ್ ಕಡಬ)newskadaba.com.ಇಚ್ಲಂಪಾಡಿ,ಜ.7.  ಶಬರಿಮಲೆಗೆ 10ರಿಂದ 50ವರ್ಷ ಒಳಗಿನ ಮಹಿಳೆಯರ ಪ್ರವೇಶಕ್ಕೆ ಕಾರಣವಾದ ಕೇರಳ ಸರಕಾರದ ವಿರುದ್ದ ಇಚ್ಲಂಪಾಡಿಯಲ್ಲಿ ಶಬರಿಮಲೆ ಪಾವಿತ್ರ್ಯ ಉಳಿಸಿ ಎಂದು ಅಯ್ಯಪ್ಪ ಭಕ್ತರು ಗೋಳಿಯಡ್ಕದವರೆಗೆ ಮೆರವಣಿಗೆ ನಡೆಸಿದ ಘಟನೆ ಜ.6ರಂದು ನಡೆಯಿತು.

ಇಚ್ಲಂಪಾಡಿ ಶ್ರೀ ಗಂಗಾಧರೇಶ್ವರ ದೇವಸ್ಥಾನದಿಂದ ಶ್ರೀ ಅಯ್ಯಪ್ಪ ಭಕ್ತರು ಮೆರವಣಿಗೆಯಲ್ಲಿ ಹೊರಟು ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರಕ್ಕೆ ಆಗಮಿಸಿ ಅಲ್ಲಿ ಸಭಾ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಉಣ್ಣಿಕೃಷ್ಣನ್, ಖಜಾಂಜಿ ವಿನೋದ್ ಕುಮಾರ್, ಗುರುಸ್ವಾಮಿಗಳಾದ ಮೋನಪ್ಪ ಶೆಟ್ಟಿ, ಗೋಳಿಯಡ್ಕ ರವೀಂದ್ರನ್ ಗುರುಸ್ವಾಮಿ, ನೀತಿ ಟ್ರಸ್ಟ್‍ನ ಸುರೇಶ್, ಗೋಪಿನಾಥ್,ಪ್ರಮುಖರಾದ ಬಿಜುಕುಮಾರ್, ಮಹೇಶ್ ಕುಮಾರ್ ಮಾನಡ್ಕ, ಅಶ್ವಥ್ ಶೆಟ್ಟಿ, ದಿನಕರ್ ಶೆಟ್ಟಿ, ಸುಜನ್, ಧನಂಜಯ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಉದಯಕುಮಾರ್ ಹೊಸಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.

Also Read  ಉಪ್ಪಿನಂಗಡಿ: ಏಕಕಾಲಕ್ಕೆ 7 ಅಂಗಡಿಗಳಿಗೆ ನುಗ್ಗಿ ಕಳ್ಳತನ

error: Content is protected !!
Scroll to Top