ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾಗಿ ►ಚಕ್ರಪಾಣಿ ಗೌಡ ಬಾಕಿಲ ಆಯ್ಕೆ

(ನ್ಯೂಸ್ ಕಡಬ)newskadaba.com.ಕಡಬ,ಜ.6. ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾಗಿ ಚಕ್ರಪಾಣಿ ಗೌಡ ಬಾಕಿಲ, ಕಾರ್ಯದರ್ಶಿಯಾಗಿ ರಾಮಣ್ಣ ಗೌಡ, ಕೋಶಾಧಿಕಾರಿಯಾಗಿ ಆನಂದ ಗೌಡ ಪಜ್ಜಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ರವಿಕುಮಾರ್ ನೆಕ್ಕಿಲಾಡಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರದೀಪ್ ಬಾಕಿಲ ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ಆಲಂಕಾರಿನಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಶೇಖರ ಗೌಡ ಕಟ್ಟಪುಣಿ, ನವೀನ ಗೌಡ ಕಕ್ವೆ, ಸಂಚಾಲಕರಾಗಿ ಅಶೋಕ ಗೌಡ ಪಜ್ಜಡ್ಕ, ಗೌರವ ಸಲಹೆಗಾರರಾಗಿ ಜನಾರ್ಧನ ಗೌಡ, ಗೌರವಾಧ್ಯಕ್ಷರಾಗಿ ಪ್ರಕಾಶ್ ವಳೆಂಜ ಹಾಗೂ ತಾಲೂಕು ಸಂಪರ್ಕಾಧಿಕಾರಿಯಾಗಿ ಕೇಶವ ಗೌಡ ಆಲಡ್ಕರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ತಾಲೂಕು ಯುವ ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಅಧ್ಯಕ್ಷ ರಾಧಾಕೃಷ್ಣ ನಂದಿಲ, ಸಂಘದ ಮುಖಂಡರಾದ ಈಶ್ವರ ಗೌಡ ಪಜ್ಜಡ್ಕ, ನಾಗಪ್ಪ ಗೌಡ ಮರುವಂತಿಲ, ಆಶಾ ತಿಮ್ಮಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

Also Read  ಕಡಬ: ಮುಖ್ಯ ಪೇಟೆಯಲ್ಲಿ ಡಿ.07 ರಂದು "ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್" ಧಾರಾವಾಹಿಯ ಫ್ಲೆಕ್ಸ್ ಅನಾವರಣ

error: Content is protected !!
Scroll to Top