(ನ್ಯೂಸ್ ಕಡಬ)newskadaba.com.ಮಂಗಳೂರು,ಜ.4. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಪಾರಾಮೆಡಿಕಲ್ ಸಯನ್ಸ್ ಇಲ್ಲಿಗೆ ಭೌತಶಾಸ್ತ್ರ , ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಗ್ಲೀಷ್, ಡಯಾಲಿಸಿಸ್ ಸಿದ್ದಾಂತ, ವೈದ್ಯಕೀಯ ದಾಖಲೆ ವಿಜ್ಞಾನ, ಆಸ್ಪತ್ರೆ ಬಯೋಸ್ಟಾಟಿಕ್ಸ್ ಮತ್ತು ಆಡಳಿತ, ವಿಕಿರಣ ಭೌತಶಾಸ್ತ್ರ ಪಠ್ಯವಿಷಯ ಭೋದಿಸಲು ಆಸಕ್ತ ಅತಿಥಿ ಉಪನ್ಯಾಸಕರನ್ನು ನೇಮಕಾತಿಗೊಳಿಸಲು ನೇರ ಸಂದರ್ಶನ ನಡೆಸಲಾಗುವುದು.
ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆ ಪ್ರಮಾಣ ಪತ್ರದ ಮೂಲದಾಖಲೆಗಳೊಂದಿಗೆ ಪಾರಾಮೆಡಿಕಲ್ ಕೋ-ಆರ್ಡಿನೇಟರ್ ಕಚೇರಿಯಲ್ಲಿ ಜನವರಿ 7 ರಂದು ಪೂರ್ವಾಹ್ನ 10 ರಿಂದ 12ಗಂಟೆಯೊಳಗೆ ಹಾಜರಾಗಬೇಕು. ಆಯ್ಕೆಯಾದ ಅತಿಥಿ ಉಪನ್ಯಾಸಕರಿಗೆ ಪ್ರತಿ ತರಗತಿಗೆ ರೂ. 500/ ರಂತೆ ಸಂಭಾವನೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 0824-243205 ಸಂಪರ್ಕಿಸಲು ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.