ಶಬರಿಮಲೆ: ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ ಮಹಿಳೆಯರು ► ಮಹಿಳೆಯರನ್ನು ಪ್ರವೇಶಿಸಿದ ಕೇರಳ ಸರಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ

(ನ್ಯೂಸ್ ಕಡಬ) newskadaba.com.ಕಡಬ,ಜ. 4. ಶಬರಿಮಲೆ ಅಯ್ಯಪ್ಪ ಸ್ವಾಮೀ ದೇವಸ್ಥಾನಕ್ಕೆ 10ರಿಂದ 50ವರ್ಷದ ಒಳಗಿನ ಮಹಿಳೆಯರ ಪ್ರವೇಶ ನಿಷಿದ್ದ ಎಂಬ ಸಂಪ್ರದಾಯ ಇರುವಾಗ ಪಿನರಾಯಿ ನೇತೃತ್ವದ ಕಮ್ಯೂನಿಸ್ಟ್ ಸರಕಾರ ಮಹಿಳೆಯರನ್ನು ಭದ್ರತೆಯಲ್ಲಿ ಪ್ರವೇಶಿಸಿದ್ದು ಘೋರ ಅನ್ಯಾಯ ಈ ಸರಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಆಗ್ರಹಿಸಿ ಕಡಬ ವಿ.ಹಿಂ.ಪ ನೇತೃತ್ವದಲ್ಲಿ ಕಡಬ ತಹಸೀಲ್ದಾರ್ ಮೂಲಕ ರಾಷ್ಟಪತಿಗೆ ಮನವಿ ಸಲ್ಲಿಸಲಾಗಿದೆ.

 

ಈ ಸಂದರ್ಭದಲ್ಲಿ ವಿ.ಹಿಂ.ಪ ಗೌರವಾಧ್ಯಕ್ಷ ಜನಾರ್ದನ ರಾವ, ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಪ್ರಮುಖರಾದ ಸಂತೋಷ್ ಸುವರ್ಣ ಕೋಡಿಬೈಲು, ಸುರೇಶ್ ಕೋಟೆಗುಡ್ಡೆ, ಸೀತಾರಾಮ ಗುರುಕೃಪಾ, ಲಿಂಗಪ್ಪ ಜೆ. ದೊಡ್ಡಕೊಪ್ಪ, ಯತೀಶ್ ಹೊಸಮನೆ, ಶಿವಪ್ರಸಾದ್,ವಿಕಾಸ್, ಕೇಶವ ಗಾಂಧಿಪೇಟೆ, ಸುವರ್ಣ ಕುಮಾರ್ ರೈ ಹಳೆಸ್ಟೇಷನ್ ಮೊದಲಾದವರು ಉಪಸ್ಥಿತರಿದ್ದರು, ಮನವಿ ಸ್ವೀಕರಿಸಿದ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು ಎಂದರು.

Also Read  ಗುಣಮಟ್ಟದ ಸೈಕಲ್ ವಿತರಿಸಿ; ನೂಜಿಬಾಳ್ತಿಲದಲ್ಲಿ 9, 10ನೇ ತರಗತಿ ಪ್ರಾರಂಭಿಸಿ ➤ ನೂಜಿಬಾಳ್ತಿಲ ಮಕ್ಕಳ ಗ್ರಾಮ ಸಭೆ

error: Content is protected !!
Scroll to Top