(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಜ. 4. ಅಲ್ಲಾಹುವಿನ ಸ್ನೇಹ ಸಂಪಾದನೆಗೆ ದಿಕ್ರ್, ಸ್ವಲಾತ್ ಹೇಳುವುದು ಉತ್ತಮ ಹಾದಿಯಾಗಿದ್ದು, ಆ ಮೂಲಕ ನಮ್ಮ ಆತ್ಮ ಶುದ್ಧೀಕರಣದೊಂದಿಗೆ ಹೃದಯಪರಿಪೂರ್ಣತೆ ಆಗುತ್ತದೆ ಜೊತೆಗೆ ಪುಣ್ಯ ಸಂಪಾದನೆ ಲಭಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಯಾರ್‍ಕತ್ತ್ ತ್ವಾಖ ಅಹ್ಮದ್ ಮೌಲವಿ ಅಲ್‍ಖಾಸಿಮಿ ಅಲ್‍ಅಝ್‍ಹರಿ ಹೇಳಿದರು.ಅವರು ಜ. 3ರಂದು ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳ ಮೊದಲ ಗುರುವಾರ ರಾತ್ರಿ ಆಚರಿಸಿಕೊಂಡು ಬರುತ್ತಿರುವ ದಿಕ್ರ್ ಹಲ್ಕಾ ಇದರ 18ನೇ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಲ್ಲಾಹನ ಬಗ್ಗೆ ಪ್ರೀತಿ ಇರುವಾತ ನೆಬಿವರ್ಯರ ಹೆಸರಿನಲ್ಲಿ, ಅಲ್ಲಾಹನ ಹೆಸರಿನಲ್ಲಿ ಹೇಳುವದಿಕ್ರ್‍ನಿಂದ ದೂರ ಇರಲಾರ ಎಂದ ಅವರು ಊರಿನ ಮಸೀದಿ, ಮೊಹಲ್ಲಗಳಲ್ಲಿ ದಿಕ್ರ್, ಸ್ವಲಾತ್ ಕಾರ್ಯಕ್ರಮ ನಡೆಯುವಂತಿದ್ದರೆ ಆ ಊರು ಸಂಸ್ಕಾರಯುತವಾಗಿ ಇರುತ್ತದೆ, ಅಲ್ಲಿ ಅಭಿವೃದ್ಧಿ ಹೊಂದುತ್ತದೆ ಈ ನಿಟ್ಟಿನಲ್ಲಿ ಇಲ್ಲಿನ ದಿಕ್ರ್ ಹಲ್ಕಾದ ಪಾವಿತ್ರತೆ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದ್ದು, ದಿಕ್ರ್‍ನ ವಿಶೇಷತೆಗೆ ಸಾಕ್ಷಿಯಾಗಿದೆ ಎಂದರು.
ಸಮಾರಂಭದಲ್ಲಿ ಹಿರಿಯ ಧಾರ್ಮಿಕ ವಿದ್ವಾಂಸ ಡಾ. ಹಾಜಿ ಶಾಹ್ ಮುಸ್ಲಿಯಾರ್, ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್, ಮುಹಿಯುದ್ದೀನ್ ಮುರ್ಷಿದ್ ಫೈಝಿ,ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಸದಸ್ಯ ಕೆ.ಎಸ್. ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಉದ್ಯಮಿಗಳಾದ ಜಿ. ಅಬೂಬಕ್ಕರ್ ಹಾಜಿ ಕಲ್ಲಡ್ಕ, ಅಬ್ದುಲ್ ನಾಸಿರ್ ಕಾಸರಗೋಡು, ಆತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಕೆ.ಎಂ. ಸಿದ್ದಿಕ್ ಫೈಝಿ, ಹಳೆನೇರೆಂಕಿ ಜುಮಾ ಮಸೀದಿ ಖತೀಬ್ ಝೈನುದ್ದೀನ್ ಯಮನಿ, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಕುಂಡಾಜೆ ಮಸೀದಿ ಖತೀಬ್ ಮುನೀರ್ ಅನ್ವರಿ, ಕೆಮ್ಮಾರ ಮದ್ರಸ ಸದರ್ ಮುಅಲ್ಲಿಂ ಅಬ್ದುಲ್ಲ ಮುಸ್ಲಿಯಾರ್, ಕುದ್ಲೂರು ಎಂ.ಜೆ.ಎಂ. ಮಸೀದಿ ಖತೀಬ್ ಮಹಮ್ಮದ್ ನಿಯಾಝ್ ಫೈಝಿ, ನೀರಾಜೆ ಮದ್ರಸದ ಅಬ್ದುಲ್ ರಜಾಕ್ ದಾರಿಮಿ, ಗಂಡಿಬಾಗಿಲು ಜುಮಾ ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ, ನೀರಾಜೆ ನೂರುಲ್ ಹುದಾ ಮದ್ರಸದ ಅಧ್ಯಕ್ಷ ಇಬ್ರಾಹಿಂ ಮೋನು, ಕುಂಡಾಜೆ ಮಸೀದಿ ಅಧ್ಯಕ್ಷ ಅಬ್ದುಲ್ಲ ಹಾಜಿ, ಕೆಮ್ಮಾರ ಮದ್ರಸ ಸಮಿತಿ ಅಧ್ಯಕ್ಷ ಎನ್.ಎ. ಇಸಾಕ್, ಆಲಂಕಾರು-ನೆಕ್ಕರೆ ಮಸೀದಿ ಅಧ್ಯಕ್ಷ ಎಂ.ಎ. ಅಬ್ದುಲ್ಲ ಕುಂಞ, ಆತೂರು ಬದ್ರಿಯಾ ಸ್ಕೂಲ್ ಸಂಚಾಲಕ ಆದಂ ಹಾಜಿ, ಆತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಖಜಾಂಚಿ ಅಬ್ದುಲ್ ಅಜೀಝ್ ಬಿ.ಕೆ. ಉಪಸ್ಥಿತರಿದ್ದರು.