(ನ್ಯೂಸ್ ಕಡಬ) newskadaba.com.ಮಂಗಳೂರು,ಜ.2.ಗೃಹ ಕಾರ್ಮಿಕರಿಗೆ ಸರ್ಕಾರ ನಿಗಧಿಪಡಿಸಿದ ಕನಿಷ್ಟ ವೇತನವನ್ನು ಗೃಹ ಕೆಲಸಕ್ಕೆ ನೇಮಿಸಿಕೊಳ್ಳುವ ಕಾರ್ಮಿಕರಿಗೆ ಕಡ್ಡಾಯವಾಗಿ ನೀಡಬೇಕು. ಗೃಹ ಕಾರ್ಮಿಕರಿಗೆ ಸರ್ಕಾರ ನಿಗಧಿಪಡಿಸಿದ ಕನಿಷ್ಟ ವೇತನದ ದರಗಳು ಇಂತಿವೆ: ತೊಳೆಯುವುದು, ಸ್ವಚ್ಛತೆ, ತರಕಾರಿ ಅಥವಾ ಮಾಂಸಹಾರ ಅಡುಗೆ ತಯಾರಿಸುವುದು, ರುಬ್ಬುವುದು, ಅಡುಗೆ ತಯಾರಿಸುವುದು ಮತ್ತು ಅಡುಗೆ ಮನೆ ಸ್ವಚ್ಛಗೊಳಿಸುವುದು ದಿನಕೂಲಿ ರೂ. 496. 20/-, ತಿಂಗಳಿಗೆ ರೂ. 13,421. 20/-.ಬಟ್ಟೆಒಗೆಯುವುದು, ಪಾತ್ರೆ ತೊಳೆಯುವುದು, ಮನೆ ಸ್ವಚ್ಛಗೊಳಿಸುವುದು, ಮನೆಕೆಲಸ ಹಾಗೂ ಮಕ್ಕಳನ್ನು ನೋಡಿಕೊಳ್ಳುವುದು. ದಿನಕೂಲಿ ರೂ. 456. 20/-, ತಿಂಗಳಿಗೆ ರೂ. 11,861. 20.
ಬಟ್ಟೆ ತೊಳೆಯುವುದು, ಮನೆ ಸ್ವಚ್ಛಗೊಳಿಸುವುದು, ಮತ್ತು ಮನೆಯ ಇತರೆ ಕೆಲಸಗಳನ್ನು ಮಾಡುವುದು. ದಿನಕೂಲಿ ರೂ. 446. 20/-, ತಿಂಗಳಿಗೆ ರೂ. 11,601. 20./-ಗೃಹ ಕಾರ್ಮಿಕರಿಗೆ ಕನಿಷ್ಟ ಕೂಲು ನೀಡದ ಪಕ್ಷದಲ್ಲಿ ಕಾರ್ಮಿಕ ಇಲಾಖೆಗೆ ದೂರು ನೀಡಿ ಪಡೆದುಕೊಳ್ಳಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿ, ದಕ್ಷಿಣ ಕನ್ನಡ ಉಪ ವಿಭಾಗ-1, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.