(ನ್ಯೂಸ್ ಕಡಬ) newskadaba.com.ಮೂಡಿಗೆರೆ,ಜ.2. ಚಾರ್ಮಾಡಿ ಘಾಟ್‌ನ ಮಾಳೂರು ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಗಿಡಮರಗಳು ಹಾಗೂ ವನ್ಯಜೀವಿಗಳು ಅಗ್ನಿಗಾಹುತಿ ಆಗಿರಬಹುದೆಂದು ಶಂಕಿಸಲಾಗಿದೆ. ಕಳೆದ 5 ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಈಗನೂರಾರು ಎಕರೆಗೆ ವ್ಯಾಪಿಸಿದೆ.
ಸುಮಾರು 50 ಎಕರೆ ಪ್ರದೇಶದಲ್ಲಿ ಕಾಡ್ಗಿಚ್ಚುಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಸಣ್ಣದಾಗಿ ಬೆಂಕಿ ಉರಿಯುತ್ತಲೇ ಇದ್ದು ಬೆಂಕಿ ಜೋರಾದಲ್ಲಿ ಮತ್ತಷ್ಟು ಹಾನಿಯಾಗುವ ಸಾಧ್ಯತೆಗಳಿವೆ. ಕಾಡ್ಗಿಚ್ಚಿನಿಂದಾಗಿ ಹುಲ್ಲುಗಾವಲು ಸಂಪೂರ್ಣ ಸುಟ್ಟು ಬೂದಿಯಾಗಿದ್ದು, ಹುಲ್ಲಿನ ಪೊದೆಗಳಲ್ಲಿ ಗೂಡುಕಟ್ಟಿದ್ದ ಪಕ್ಷಿಗಳು, ಪೊದೆಗಳ ನಡುವೆ ಇರುವ ಕಾಡುಕುರಿ, ಮೊಲಗಳಂತಹ ಪ್ರಾಣಿಗಳ ಮರಿಗಳು, ಚಿಟ್ಟೆ ಮತ್ತಿತರ ಕೀಟಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ.