ಪದವೀಧರರಾಗಿ ಕೆಲಸವಿಲ್ಲದೆ ಅಲೆದಾಡುತ್ತಿದ್ದೀರಾ? ಸ್ವ-ಉದ್ಯೋಗಕ್ಕೆ ಸರಕಾರ ನೀಡುತ್ತಿದೆ ಹತ್ತು ಲಕ್ಷ ಸಾಲ   

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.2. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 2018-19 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳು ಅಂದರೆ ಪ್ರವರ್ಗ 1, 2ಎ ಮತ್ತು 3ಎ, 3ಬಿ ನಲ್ಲಿ ಬರುವ ಜನಾಂಗದ (ವಿಶ್ವಕರ್ಮ ಉಪಜಾತಿ ಜನಾಂಗ , ಉಪ್ಪಾರ ಉಪಜಾತಿ ಜನಾಂಗ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಬೆಸ್ತ, ಗಂಗಾಮತ, ಮೊಗವೀರ ಉಪಜಾತಿಗೆ ಹೊರತುಪಡಿಸಿ) ನಿರುದ್ಯೋಗಿ ಪದವೀಧರರು ಉದ್ಯಮ ಸ್ಥಾಪಿಸಲು ಅನುಕೂಲಕರವಾಗುವಂತೆ ಶೇ. 6 ರ ಬಡ್ಡಿ ದರದಲ್ಲಿ ಗರಿಷ್ಠ ರೂ. 10 ಲಕ್ಷಗಳ ಸಾಲವನ್ನು ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.

ಅರ್ಜಿದಾರರು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು.  ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ಆದಾಯ ರೂ. 40,000 ಹಾಗೂ ನಗರ ಪರಿಮಿತಿಯವರಿಗೆ ರೂ. 55,000 ಗಳ ಮೀರಿರಬಾರದು. ಅರ್ಜಿದಾರರು ಕನಿಷ್ಠ 25 ವರ್ಷಗಳಿಂದ ಗರಿಷ್ಠ 40 ವರ್ಷದ ಮಿತಿಯೊಳಗಿರಬೇಕು. ಅರ್ಜಿದಾರರು ಉದ್ಯಮ ಕೈಗೊಳ್ಳಲು ಅನುಭವ ಹಾಗೂ ತರಬೇತಿ ಹೊಂದಿರಬೇಕು. ಸಾಲದ ಖಾತ್ರಿಗಾಗಿ ಸಾಲದ ದುಪಟ್ಟ ಮೊತ್ತದ ಆಸ್ತಿಯನ್ನು ನಿಗಮದ ಹೆಸರಿಗೆ ಆಧಾರ  ಮಾಡಬೇಕಾಗಿರುತ್ತದೆ.

Also Read  ಕಡಬ: ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ 

ಅರ್ಜಿದಾರರು ಸ್ಥಾಪಿಸುವ ಉದ್ಯಮಗಳಲ್ಲಿ ಮೀನು ಸಂಸ್ಕಾರ, ಶೀತಲಗೃಹ, ಯಂತ್ರೋಪಕರಣಗಳ ದುರಸ್ತಿ, ಮಾರಾಟ ನೂತನ ಫ್ಯಾಷನ್ ವಸ್ತುಗಳ ತಯಾರಿಕೆ, ಅಡಿಕೆ ಹಾಳೆ ತಯಾರಿಕೆ, ಮತ್ತು ಇತರೇ ವಸ್ತುಗಳ ತಯಾರಿಕೆ, ಮಾರಾಟಗಳಾಗಿರಬಹುದು. ಅರ್ಜಿಗಳನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃಧ್ಧಿ ನಿಗಮ, ಉರ್ವಾ ಸ್ಟೋರ್, ರೇಡಿಯೋ ಪಾರ್ಕ್, ಮಂಗಳೂರು ನ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಪಡೆಯಬಹುದಾಗಿರುತ್ತದೆ. ಅರ್ಜಿಗಳನ್ನು ಸ್ವೀಕರಿಸಲು ಕಡೆಯ ದಿನ ಜನವರಿ 8. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ದೂರವಾಣಿ ಸಂಖ್ಯೆ 0824-2456544 ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Also Read  ಕಾರ್ಕಳದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇಲ್ಲ: ಆಸ್ಪತ್ರೆಗೆ ತಲುಪಿದ ನೆಗೆಟಿವ್ ರಿಪೋರ್ಟ್

error: Content is protected !!
Scroll to Top