ಉಪ್ಪಿನಂಗಡಿ: ವರ್ಷದ ಹಿಂದೆ ಪ್ರೇಮಿಸಿ ವಿವಾಹವಾಗಿದ್ದ ತರುಣಿ ವಿಷಸೇವಿಸಿ ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ, ಜ.1. ವರ್ಷದ ಹಿಂದೆಯಷ್ಟೇ ಪ್ರೇಮ ವಿವಾಹವಾಗಿದ್ದ ಯುವತಿ ವಿಷ ಸೇವಿಸಿ ಸಾವನ್ನಪ್ಪಿದ್ದ ಘಟನೆ ಜ.1 ರಂದು ಮಂಗಳವಾರ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿ ನಡೆದಿದೆ.





ತವರು ಮನೆಯಲ್ಲಿದ್ದ ದಿವ್ಯಾ ಪೂಜಾರಿ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿರುವ ಗಂಡನ ಮನೆಗೆ ಡಿ.31 ರಂದು ತೆರಳಿದ್ದರು. ಆದರೆ ಜ.1 ರಂದು ಮುಂಜಾನೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದಾರೆ. ಸುಮಾರು 10 ಗಂಟೆ ವೇಳೆಗೆ ತಾವು ವಿಷ ಸೇವನೆ ಮಾಡಿರುವುದಾಗಿ ಗಂಡನ ಮನೆಯವರಿಗೆ ತಿಳಿಸಿದ್ದು ತಕ್ಷಣ ಮನೆ ಮಂದಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿವ್ಯಾ ಮದ್ಯಾಹ್ನ ಮೃತಪಟ್ಟಿದ್ದಾರೆ. ಎಂದು ತಿಳಿದು ಬಂದಿದೆ.ಮೃತಪಟ್ಟ ದಿವ್ಯಾ ಪುತ್ತೂರಿನ ಜವುಳಿ ಮಳಿಗೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.






 

error: Content is protected !!
Scroll to Top