(ನ್ಯೂಸ್ ಕಡಬ) newskadaba.com.ಆರ್‌ಬಿಐ, ಜ.1. ಆರ್‌ಬಿಐ ಸೂಚನೆ ಪ್ರಕಾರ, ಜನವರಿ 1ರಿಂದ ಚಿಪ್ ರಹಿತ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಂತಿಲ್ಲ. ಯಾಕೆಂದರೆ ಚಿಪ್ಪಿಲ್ಲದ ಕಾರ್ಡಲ್ಲಿ ದುಡ್ಡು ಬರುವುದಿಲ್ಲ. ಈಗಾಗಲೇ ಬ್ಯಾಂಕ್‌ಗಳು ಇಎಂವಿ ಚಿಪ್ ಇರುವ ಕಾರ್ಡ್‌ಗಳನ್ನು ವಿತರಿಸುತ್ತಿವೆ. ಒಂದು ವೇಳೆ ಹಳೆಯ ಕಾರ್ಡ್ ಬದಲಿಸಿಲ್ಲವಾದರೆ, ತಕ್ಷಣವೇ ಬದಲಾಯಿಸಿಕೊಳ್ಳಿ.
ಹೊಸ ವರ್ಷದಿಂದ ಬ್ಯಾಂಕ್‌ಗಳು ಸಿಟಿಎಸ್ ತಂತ್ರಜ್ಞಾನ ಹೊಂದಿದ ಚೆಕ್ ಬುಕ್ ವಿತರಿಸುತ್ತವೆ. ಗ್ರಾಹಕರು ಈಗಿರುವ ಸಿಟಿಎಸ್ ರಹಿತ ಚೆಕ್‌ಗಳನ್ನು ಬಳಸಬಹುದಾದರೂ, ಕ್ಲಿಯರಿಂಗ್ ವಿಳಂಬ ಆಗಬಹುದು. ಕೂಡಲೇ ಸಿಟಿಎಸ್ ಹೊಂದಿದ ಚೆಕ್‌ಬುಕ್‌ಗೆ ಅರ್ಜಿ ಹಾಕಿ.
ವಾರ್ಷಿಕ 6ರಿಂದ 18 ಲಕ್ಷ ರೂ. ಆದಾಯ ಹೊಂದಿದ್ದು, ಮೊದಲ ಮನೆ ಖರೀದಿಸುವವರಿಗೆ 2.5 ಲಕ್ಷ ರೂ.ವರೆಗೆ ಸಬ್ಸಿಡಿ ನೀಡುವ ಕೇಂದ್ರದ ಯೋಜನೆ 2020ರವರೆಗೆ ವಿಸ್ತರಣೆಯಾಗಿದೆ. 2018ರಲ್ಲಿ 1 ಲಕ್ಷ ಜನ ಲಾಭ ಪಡೆದಿದ್ದಾರೆ.