ಸುಳ್ಯದ ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ ►ಕೇರಳದ ಲಾಟರಿಯಲ್ಲಿ ಸಿಕ್ಕಿತ್ತು 80 ಲಕ್ಷ ರೂ. ಬಂಪರ್ ಬಹುಮಾನ

(ನ್ಯೂಸ್ ಕಡಬ) newskadaba.com.ಸುಳ್ಯ, ಜ.1. ಸುಳ್ಯತಾಲೂಕಿನ ದುಗಲಡ್ಕದ ಈಶ್ವರಡ್ಕ ಶಿವಕುಮಾರ್ ಎಂಬವರು ದುಗಲಡ್ಕದಲ್ಲಿ ಸುಮಾರು 15 ವರ್ಷ ದಿಂದ ರಿಕ್ಷಾ ಚಾಲಕರಾಗಿರುವ ಹಾಗೂ ಅವರು ಸುಳ್ಯ ಪಟ್ಟಣ ಪಂಚಾಯಿತಿ ದುಗ್ಗಲಡ್ಕ ವಾರ್ಡ್ನ ಪಂಪ್ ಆಪರೇಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಜೀವನದಲ್ಲಿ ಅವರೇ ಊಹಿಸಲಾಗದ ಅದೃಷ್ಟ ಘಟನೆ ನಡೆಯಿತು. ದೇವರ ದರ್ಶನಕ್ಕೆಂದು ಗಡಿನಾಡು ಕಾಸರಗೋಡು ಜಿಲ್ಲೆಗೆ ಹೋಗಿದ್ದ ಸಂದರ್ಭದಲ್ಲಿ ಖರೀದಿಸಿದ್ದ ಕೇರಳ ಲಾಟರಿಗೆ 80 ಲಕ್ಷ ರೂ. ಬಂಪರ್ ಬಹುಮಾನ ಹೊಡೆದಿರುವ ಪ್ರಸಂಗ ನಡೆದಿದೆ.

Also Read  ಮಂಗಳೂರು : ಹತ್ಯೆಗೀಡಾದ ಯೋಗೀಶ್ ಮನೆಗೆ ಶಾಸಕ ರಘುಪತಿ ಭಟ್ ಭೇಟಿ

ಡಿ.29ರಂದು ಅಡೂರು ದೇವಸ್ಥಾನಕ್ಕೆ ಹೋಗಿ, ವಾಪಸ್ ಆಗುವ ಸಂದರ್ಭದಲ್ಲಿ ಅವರು ಅಲ್ಲಿ ಕೇರಳ ರಾಜ್ಯದ ಕಾರುಣ್ಯ ಲಾಟರಿ ಖರೀದಿಸಿದ್ದರು. ಅದೇ ದಿನ ಸಂಜೆಯ ವೇಳೆಗೆ ಆನ್ಲೈನ್ನಲ್ಲಿ ಫಲಿತಾಂಶ ನೋಡಿದಾಗ ಬಹುಮಾನ ಅವರ ನಂಬರಿಗೆ ಬಂದಿತ್ತು. ಶೇ.35ರಷ್ಟುಮನರಂಜನಾ ತೆರಿಗೆಗಳು ಕಡಿತಗೊಂಡು ಸುಮಾರು 52 ಲಕ್ಷದಷ್ಟುಮೊತ್ತ ಸಿಗುವ ಅಂದಾಜಿದೆ.

error: Content is protected !!
Scroll to Top