ಅಕ್ರಮ ಗಾಂಜಾ ಸಾಗಾಟ: ಆರೋಪಿ ಪೊಲೀಸ್ ಬಲೆಗೆ

(ನ್ಯೂಸ್ ಕಡಬ) newskadaba.com ಉಡುಪಿ, ಜು.28. ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಉಡುಪಿ ಡಿಸಿಐಬಿ ಪೊಲೀಸರು ಕಲ್ಸಂಕ ರಾಯಲ್ ಗಾರ್ಡನ್ ಬಳಿ ಬಂಧಿಸಿದ್ದಾರೆ.

ಬಂದಿತನ್ನು ಕಾಪು ಮಲ್ಲಾರು ಕೋಟೆ ರಸ್ತೆಯ ಉಬೇದುಲ್ಲಾ ಯಾನೆ ಮುಹಮ್ಮದ್ ಖಾಸಿಮ್(53) ಎಂದು ಗುರುತಿಸಲಾಗಿದೆ. ಈತನಿಂದ 45,000ರೂ. ವೌಲ್ಯದ 1,450 ಗ್ರಾಂ ಗಾಂಜಾ, ಬೈಕ್, ಎರಡು ಮೊಬೈಲ್, 2200ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ ಉಡುಪಿ ಡಿವೈಎಸ್ಪಿ ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top