ಕುಟ್ರುಪಾಡಿ: ಗ್ರಾಮ ಪಂಚಾಯತ್‍ವತಿಯಿಂದ ರಾಮಕೃಷ್ಣ ಮಿಷನ್ ಹಾಗೂ ದ.ಕ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com.ಕಡಬ, ಜ.1.ಕುಟ್ರುಪಾಡಿ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 30.12.2018ರಂದು ಪೂರ್ವಾಹ್ನ 7.00ಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ.ಕೆ.ಗೋಗಟೆ ಇವರು ಸ್ವಚ್ಚ ಗ್ರಾಮ ಅಭಿಯಾನ_ ಸ್ವಚ್ಚ ಕುಟ್ರುಪಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು ಇಂದು ನಮ್ಮೊಂದಿಗೆ ಕೈಜೋಡಿಸಿದ್ದು, ನಮ್ಮ ಗ್ರಾಮ ಸ್ವಚ್ಚ ಗ್ರಾಮವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ವಿವಿಧ ಕಾಲನಿಯ ಗ್ರಾಮಸ್ಥರಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಪ್ರತಿ ತಿಂಗಳ ಒಂದು ಬಾನುವಾರ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡು ವಿವಿಧ ಧಾರ್ಮಿಕ ಕೇಂದ್ರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸುವರೇ ವಿವಿಧ ಸಂಘ ಸಂಸ್ಥೆಗಳ ಸಹಕಾರವನ್ನು ಕೋರಿದರು.

ಹೊಸ್ಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕ್‍ನ ಉಪಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಪುತ್ತಿಲ ಇವರು ಸ್ವಚ್ಚ ಕುಟ್ರುಪಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ನಿರ್ದೇಶಕರಾದ ಶ್ರೀ ಶಶಾಂಕ ಗೋಗಟೆ ಮಾರ್ಗದಮನೆ ಇವರು ವಿನೂತನ ಕಾರ್ಯಕ್ರಮವನ್ನು ಕುಟ್ರುಪಾಡಿ ಗ್ರಾಮ ಪಂಚಾಯತ್ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮ ಸ್ವಚ್ಚ ಗ್ರಾಮವಾಗಿ ಮೂಡಿಬರಲಿ ಎಂದು ಶುಭ ಹಾರೈಸಿ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾದ್ಯಕ್ಷರಾದ ಶ್ರೀ ಆನಂದ ಪೂಜಾರಿ ಗ್ರಾ.ಪಂ ಸದಸ್ಯರಾದ ಶ್ರೀ ಎಂ.ಲಿಂಗಪ್ಪ ಗೌಡ, ಶ್ರೀಮತಿ ಜಾನಕಿ, ಶ್ರೀ ಮಹಮ್ಮದಾಲಿ, ಸ್ನೇಹ ಸೇತು ಯುವಕ ಮಂಡಲ ಅಲಾರ್ಮೆ, ಪ್ರೀಡಂ ಬಾಯ್ಸ್ ಬಲ್ಯ, ಆದರ್ಶ ಸ್ಪೋಟ್ಸ್ ಕ್ಲಬ್ ಹೊಸ್ಮಠ-ಬಲ್ಯ, ಲಕ್ಷ್ಮೀ ಜನಾರ್ದನ ಯುವಕ ಮಂಡಲ ಕೇಪು, ಕುಟ್ರುಪಾಡಿ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು, ಮುಖ್ಯಗುರುಗಳು, ಹಾಲು ಉತ್ಪಾದಕರ ಸಂಘದ ಸದಸ್ಯರು, ಅಂಚೆ ಪಾಲಕರು, ಜೀಪು ಮತ್ತು ಅಟೋ ರಿಕ್ಷ ಚಾಲಕ ಮಾಲಕರು, ಕುಟ್ರುಪಾಡಿ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಆಶಾ ಕಾರ್ಯಕರ್ತೆಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Also Read  ಉಳ್ಳಾಲ: ಬಸ್ - ಬೈಕ್ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು

ಸುಮಾರು ಎರಡುವರೇ ಗಂಟೆಗಳ ಕಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಆವರಣ, ಹೊಸ್ಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಆವರಣ, ಹೊಸ್ಮಠ ಪೇಟೆ ಮತ್ತು ಚರಂಡಿಯ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಲಾಯಿತು. ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಲಘುಪಹಾರದ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ವತಿಯಿಂದ ಒದಗಿಸಲಾಯಿತು.

Also Read  ಕಲ್ಲಡ್ಕ ಭಟ್ ಅಧೀನದ ಶಾಲಾ ಅನುದಾನ ರದ್ದು ► ರಾಜ್ಯ ಸರಕಾರದ ವಿರುದ್ಧ ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

error: Content is protected !!
Scroll to Top