ಕಡಬ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ► ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ



(ನ್ಯೂಸ್ ಕಡಬ) newskadaba.com ಕಡಬ, ಡಿ.31. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಕಡಬ ಠಾಣಾ ಪೊಲೀಸರು ಸೋಮವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.





ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಕುರುಬರ ಕೇರಿ ಜಾಲು ನಿವಾಸಿ ಕಿಟ್ಟಣ್ಣ ಆಚಾರ್ಯ ಎಂಬವರ ಪುತ್ರ ರವೀಂದ್ರ ಆಚಾರ್ಯ (26) ಎಂದು ಗುರುತಿಸಲಾಗಿದೆ. ಠಾಣಾ ವ್ಯಾಪ್ತಿಯ ಕುಂತೂರು ಮೂಲದ ಬಾಲಕಿಯೋರ್ವಳು ಡಿಸೆಂಬರ್ 12 ರಂದು ನಾಪತ್ತೆಯಾಗಿದ್ದು, ಆ ಬಳಿಕ ಪುತ್ತೂರಿನಲ್ಲಿ ಪತ್ತೆ ಹಚ್ಚಲಾಗಿತ್ತು. ಆರೋಪಿ ರವೀಂದ್ರ ಆಚಾರ್ಯ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಬಾಲಕಿ ನೀಡಿದ ಮಾಹಿತಿಯಂತೆ ಆರೋಪಿಯ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಕಡಬ ಪೊಲೀಸರು ಸೋಮವಾರದಂದು ಆರೋಪಿಯನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಬಂಧಿಸಿದ್ದಾರೆ.






error: Content is protected !!
Scroll to Top