ಅಡೆಂಜ: ಶಾಲಾ ಸುವರ್ಣ ಮಹೋತ್ಸವ ಉದ್ಘಾಟನೆ► ರಾಷ್ಟ್ರ ನಿರ್ಮಾಣ, ರಕ್ಷಣೆಯ ಶಿಕ್ಷಣ ಅಗತ್ಯ – ನಳಿನ್ ಕುಮಾರ್ ಕಟೀಲ್

(ನ್ಯೂಸ್ ಕಡಬ) newskadaba.com.ಕಡಬ, ಡಿ.31. ಮಾನವೀಯತೆ, ಮೌಲ್ಯಾಧಾರಿತ ಮಹಾ ಶಿಕ್ಷಣದೊಂದಿಗೆ ರಾಷ್ಟ್ರ ನಿರ್ಮಾಣದ, ದೇಶ ರಕ್ಷಣೆಯ ಶಿಕ್ಷಣ ನಮಗೆ ಇಂದು ಅಗತ್ಯವಾಗಿದೆ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಡಿ.29ರಂದು ನೂಜಿಬಾಳ್ತಿಲ ಗ್ರಾಮದ ಅಡೆಂಜ ಕಿರಿಯ ಪ್ರಾಥಮಿಕ ಶಾಲಾ ಸುವರ್ಣ ಸಂಭ್ರಮ ಡಿಸೆಂಬರ್ 2018 ಕಾರ್ಯಕ್ರಮದಲ್ಲಿ ಶಾಲಾ ಕಂಪ್ಯೂಟರ್ ಹಾಗೂ ಗ್ರಂಥಾಲಯ ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಶತಮಾನಗಳ ಶಾಲೆಗಳನ್ನು ಮೀರಿಸುವಂತಹ ಈ ಗ್ರಾಮೀಣ ಭಾಗದ ಕಿ.ಪ್ರಾ.ಶಾಲೆಯ ಕಾರ್ಯ ವೈಖರಿ ಶ್ಲಾಘನೀಯವಾಗಿದೆ. ಸಮಾಜದ ಜೊತೆ ಉತ್ತಮ ಸಂಬಂಧಗಳನ್ನು ಬೆಳೆಸಿಕೊಂಡು ಈ ಶಾಲೆಯನ್ನು ಬೆಳೆಸಿದ್ದು, ಮೆಚ್ಚಲೇಬೇಕಾಗಿದೆ. ಇವತ್ತು ಶಾಲೆ ಮತ್ತು ಸಮಾಜಕ್ಕೆ ಬಾಂದವ್ಯವೇ ಇಲ್ಲದಂತಾಗಿದೆ. ಊರಿನ ದೇವಾಲಯಗಳಿಗಿಂತಲೂ ಅತೀ ಪ್ರಾಮುಖ್ಯವಾದ ಜ್ಞಾನ ದೇಗುಲವಾದ ಈ ವಿದ್ಯಾ ದೇಗುಲಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಶಾಲೆಗಳನ್ನು ಬಂದ್ ಮಾಡುವ ಹಂತಕ್ಕೆ ತಲುಪುತಿದ್ದು, ಅಂತಹದರಲ್ಲಿ ಈ ಗ್ರಾಮೀಣ ಭಾಗದಲ್ಲಿ ಹಿರಿಯರು ಕಟ್ಟಿಬೆಳೆಸಿದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಮೂಲಕ ಸರಕಾರಿ ಶಾಲೆಯನ್ನು ಉಳಿಸಿಕೊಂಡು ಇಷ್ಟು ವಿಜೃಂಭನೆಯಿಂದ ಸಂಭ್ರಮಿಸುತ್ತಿರುವುದು ಈ ಊರಿನವರ ಸಾಹಸದ ಕೆಲಸವಾಗಿದೆ. ಈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಊರವರು ಸೇರಿಕೊಂಡು ಇಷ್ಟೊಂದು ವಿಜೃಂಭಣೆಯಿಂದ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಇಂದಿನ ಕಾಲ ಘಟ್ಟದಲ್ಲಿ ವಿಶಿಷ್ಠವಾಗಿದೆ. ಸರಕಾರಿ ಶಾಲೆಗಳನ್ನು ಮುಚ್ಚುವಂತಹ ಈಗಿನ ಪರಿಸ್ಥತಿಯಲ್ಲಿ ಈ ಗ್ರಾಮದವರು ಈ ಶಾಲೆಯನ್ನು 50 ವರ್ಷಗಳಿಂದ ಉಳಿಸಿ ಬೆಳೆಸಿ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿರುವುದು ಹೆಮ್ಮೆಯ ವಿಚಾರ ಈ ಶಾಲೆಗೆ ನನ್ನ ವೈಯಕ್ತಿಕ ನಿಧಿ ಯಿಂದ ರೂ. 2ಲಕ್ಷ ರೂ. ನೀಡುವುದಾಗಿ ಘೋಷಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.

Also Read  ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಧರೆ ಕುಸಿತ ➤ ಸುಳ್ಯ- ಪಾಣತ್ತೂರು ಅಂತರಾಜ್ಯ ರಸ್ತೆ ಸಂಪರ್ಕ ಕಡಿತ

ನನ್ನನ್ನು ಇಂಗ್ಲೀಷ್ ಗೊತ್ತಿಲ್ಲದ ಸಂಸದ ಎಂದು ಅಪಹಾಸ್ಯ ಮಾಡುತ್ತಿದ್ದಾರೆ, ನಾನು ಪೆರುವಾಜೆಯ ಒಂದು ಗ್ರಾಮೀಣ ಸರಕಾರಿ ಕನ್ನಡ ಮಾದ್ಯಮ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು, ಒಬ್ಬ ಸಂಸದನಾಗಿ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಸೇವೆಗೆ ಒತ್ತು ನೀಡುವುದಲ್ಲದೇ, ದೇಶದಾದ್ಯಂತ ಸಂಚರಿಸುತ್ತಿದ್ದೇನೆ. ನಾನು ನಿಜವಾಗಿಯೂ ಕನ್ನಡದಲ್ಲಿ ಮಾತನಾಡಲು ಹೆಮ್ಮೆ ಪಡುತ್ತೇನೆ ಎಂದು ತನ್ನನ್ನು ಅವಮಾನಿಸುತ್ತಿರುವವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನೂಜಿಬಾಳ್ತಿಲ ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ ಕೊಪ್ಪ ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶುಭಹಾರೈಸಿದರು.
ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಧ್ವಜಸ್ಥಂಭವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿ ಸುವರ್ಣ ಸಂಭ್ರಮದಲ್ಲಿರುವ ಅಡೆಂಜ ಶಾಲೆ ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ. 50 ವರ್ಷಗಳ ಹಿಂದೆ ಈ ಶಾಲೆಯನ್ನು ನಿರ್ಮಿಸಲು ಶ್ರಮವಹಿಸಿದ್ದ ಹಿರಿಯರನ್ನು ನಾವು ಸದಾ ಸ್ಮರಿಸುತ್ತಾ, ಅವರು ಕಟ್ಟಿ ಬೆಳೆಸಿದ ಸರಕಾರಿ ಶಾಲೆಯನ್ನು ನಾವೆಲ್ಲ ಉಳಿಸಿ ಅಭಿವೃದ್ಧಿಪಡಿಸುವತ್ತ ಕೈಜೋಡಿಸಬೇಕೆಂದು ಹೇಳಿ, ಶಾಲೆ ನಿರ್ಮಾಣಕ್ಕೆ ಶ್ರಮಿಸಿದ ಹಿರಿಯರನ್ನು ಒಂದು ನಿಮಿಷ ಮೌನ ಪ್ರಾರ್ಥನೆ ಮಾಡುವ ಮೂಲಕ ಸ್ಮರಿಸಿಕೊಂಡರು.ಶ್ರೀ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಿರಿಯರು ಈ ಶಾಲೆಯನ್ನು ನಿರ್ಮಿಸಲು ಅಂದು ಪಟ್ಟ ಶ್ರಮ ಇಂದು ಈ ಭಾಗಕ್ಕೆ ಬೆಳಕಾಗಿದ್ದು, ಈ ಭಾಗದವರು ವಿದ್ಯಾವಂತರಾಗಲು ಹಿರಿಯರು ಶ್ರಮಪಟ್ಟಿದ್ದು, ನಾವುಗಳು ಸರಕಾರಿ ಶಾಲೆಗೆ ಮಕ್ಕಳನ್ನು ಕಳಿಹಿಸುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ಸಹಕರಿಸೋಣ ಎಂದರು.ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಧಕೃಷ್ಣ ಅಡೆಂಜ ರವರು ನೂತನ ಧ್ವಜಕಟ್ಟೆ ಎದುರು ತೆಂಗಿನ ಕಾಯಿ ಒಡೆದು ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುವಂತೆ ಪ್ರಾರ್ಥಿಸಿದರು.

Also Read  ಈ ಒಂದು ಮಂತ್ರವನ್ನು ಪ್ರತಿನಿತ್ಯ ಪಡಿಸುವುದರಿಂದ ಎಲ್ಲಾ ರೀತಿಯ ಕಾರ್ಯಗಳು ಪೂರ್ಣಗೊಳ್ಳುತ್ತವೆ

ಪಂ.ಅಭಿವೃದ್ಧಿ ಅಧಿಕಾರಿ ಆನಂದ ಗೌಡ, ನೂಜಿಬಾಳ್ತಿಲ ಒಕ್ಕೂಟ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷ ಬಾಲಕೃಷ್ಣ ಗೌಡ ಉಳಿಪ್ಪು ಸಂದರ್ಭೋಚಿತವಾಗಿ ಮಾತನಾಡಿದರು.ಗ್ರಾ.ಪಂ.ಸದಸ್ಯರಾದ ಹರೀಶ್ ಎನ್., ಹೊನ್ನಮ್ಮ ಪಾಲ್ತಡ್ಕ, ನೂಜಿಬಾಳ್ತಿಲ ಸಿ.ಆರ್.ಪಿ.ಗೋವಿಂದ ನಾಯ್ಕ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶ್ರೀಧರ ಗೌಡ ಕೆರ್ನಡ್ಕ, ರಬ್ಬರ್ ಬೆಳೆಗಾರರ ಮತ್ತು ಮಾರಾಟ ಸಂಘದ ನಿರ್ದೇಶಕ ಸತ್ಯಾನಂದ ಬೊಳ್ಳಾಜೆ, ನೂಜಿಬಾಳ್ತಿಲ ಗ್ರಾ.ಪಂ.ಮಾಜಿ ಸದಸ್ಯ ತಮ್ಮಯ್ಯ ಗೌಡ ಬಳ್ಳೇರಿ, ಜಗದೀಶ್ ಕೆರ್ನಡ್ಕ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ಚಂದ್ರ ಅಡೆಂಜ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಕೇಶವ ಗೌಡ, ರಾಮಣ್ಣ ಗೌಡ ಬೊಳ್ಳಾಜೆ, ಕೆ.ಎಸ್.ಆರ್.ಟಿ.ಸಿ.ನಿರ್ವಾಹಕ ಬಾಲಕೃಷ್ಣ ಮೂಡೆಜಾಲು, ಸಿವಿಲ್ ಇಂಜಿನೀಯರ್ ಅನಿಲ್ ಕೆರ್ನಡ್ಕ, ಈಶ ಎಂಟರ್‍ಪ್ರೈಸಸ್ ಮಾಲಕ ಪ್ರಮೋದ್ ಇಚಿಲಡ್ಕ, ತುಳಸಿ ಜಯಪ್ರಕಾಶ್ ಮೂಡೆಜಾಲು ಮೊದಲಾದವರು ಸಹಕರಿಸಿದರು. ಪ್ರಮುಖರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಭಾಸ್ಕರ ಗೌಡ ಇಚ್ಲಂಪಾಡಿ, ಚಂದ್ರಶೇಖರ ಗೌಡ ನೂಜಿ, ವೆಂಕಟ್ರಮಣ ಎಸ್.ಎಚ್. ಉಮೇಶ್ ಶೆಟ್ಟಿ ಸಾಯಿರಾಮ್, ಕಿಟ್ಟು ಕೆ.ಕಲ್ಲುಗುಡ್ಡೆ, ರಾಮಚಂದ್ರ ಎಸ್., ಮೋನಪ್ಪ ಗೌಡ ಅರಿಮಜಲು ಸೇರಿದಂತೆ ಎಸ್.ಡಿ.ಎಂ.ಸಿ.ಸದಸ್ಯರು, ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ಪೋಷಕರು, ಗ್ರಾಮಸ್ಥರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮುಖ್ಯ ಶಿಕ್ಷಕ ರವಿಕುಮಾರ ಜಿ.ಆರ್. ಸ್ವಾಗತಿ, ಶಿಕ್ಷಕಿ ಎಲಿಯಮ್ಮ ವಂದಿಸಿದರು. ಶಿಕ್ಷಕ ಶ್ರೀಧರ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ವೀಣಾ, ಅಂಗನವಾಡಿ ಶಿಕ್ಷಕಿ ಸಾರಮ್ಮ ಸಹಕರಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಪ್ರಕಾಶ್ ಮೂಡೆಜಾಲು, ಉಪಾಧ್ಯಕ್ಷೆ ರಾಜೇಶ್ವರಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

Also Read  ಹಿರಿಯ ಪತ್ರಕರ್ತ ರವಿರಾಜ್ ವಳಳಾಂಬೆ ನಿಧನ

 

error: Content is protected !!
Scroll to Top