(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಡಿ.31 ದಿಕ್ರ್, ಸ್ವಲಾತ್‍ಗೆ ಅದರದ್ದೇ ಆದ ಪಾವಿತ್ರತೆ ಇದೆ, ಅದನ್ನು ಹೇಳುವಾತ ಸ್ವರ್ಗವಾಸಿ ಆಗಲಿದ್ದಾನೆ, ಆತನ ಜೀವನ ಧನ್ಯ ಆಗಲಿದೆ ಎಂದು ಆತೂರುಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಮುಹಿಯುದ್ದೀನ್ ಮುರ್ಷಿದ್ ಫೈಝಿ ಹೇಳಿದರು.ಅವರು ಡಿ. 29ರಂದು ಆತೂರು ಬದ್ರಿಯಾ ಜುಮಾ ಮಸೀದಿ ವತಿಯಿಂದ ಪ್ರತೀ ತಿಂಗಳು ಆಚರಿಸಿಕೊಂಡು ಬರುತ್ತಿರುವ ದಿಕ್ರ್ ಹಲ್ಖಾ ಇದರ 18ನೇ ವಾರ್ಷಿಕೋತ್ಸವ ಸಮಾರಂಭದ ಸಲುವಾಗಿ ಹಮ್ಮಿಕೊಳ್ಳಲಾದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಹಳಷ್ಟು ಮಂದಿ ದಿಕ್ರ್ ನಮಾಜು ಬಳಿಕ ಮಾತ್ರ ಹೇಳುವುದು ಎಂದು ನಂಬಿದವರಿದ್ದಾರೆ, ಆದರೆ ದಿಕ್ರ್, ಸ್ವಲಾತ್ ಯಾವುದೇ ಸಂದರ್ಭಗಳಲ್ಲಿ ಹೇಳಬಹುದಾಗಿದ್ದು, ಅಂತಹ ವ್ಯಕ್ತಿಯನ್ನು ಅಲ್ಲಾಹು ಇಷ್ಟಪಡುತ್ತಾನೆ, ಆತನ ಸಂಪ್ರೀತಿ ಪಡೆಯುತ್ತಾನೆ ಎಂದರು.
ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೈಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಅಧ್ಯಕ್ಷತೆ ವಹಿಸಿ ಮಾತನಾಡಿ ಆತೂರು ದಿಕ್ರ್ ಮಜ್ಲಿಸ್‍ಗೆ ಅದರದ್ದೇ ಆದ ಪಾವಿತ್ರತೆ ಇದೆ, ಬಹಳಷ್ಟು ಮಂದಿಯ ರೋಗ, ರುಜಿನಗಳು, ಸಮಸ್ಯೆಗಳು ನಿವಾರಣೆ ಆಗಿದ್ದು, ಇದರ ವಾರ್ಷಿಕೋತ್ಸವ ಸಂಭ್ರಮ ಮತ್ತಷ್ಟು ಪ್ರೇರಕವಾಲಿದೆ ಎಂದರು.ಹಿರಿಯ ಧಾರ್ಮಿಕ ವಿದ್ವಾಂಸ ಅಲ್‍ಹಾಜಿ ಡಾ| ಕೆ.ಎಂ. ಶಾಹ್ ಮುಸ್ಲಿಯಾರ್ ದುವಾಃ ನೆರವೇರಿಸಿದರು. ಮಲಪ್ಪುರಂ ಕುಟ್ಟಿಕಡವು ಜುಮಾ ಮಸೀದಿ ಮುದರ್ರಿಸ್ ಎ.ಟಿ. ಅಬ್ದುಲ್ ರಹಿಮಾನ್ ದಾರಿಮಿ ಧಾರ್ಮಿಕ ಉಪನ್ಯಾಸ ನೀಡಿದರು.ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಕೆ. ಅಬ್ದುಲ್ ರಜಾಕ್, ಸದರ್ ಮುಅಲ್ಲಿಂ ಹಂಝ ಸಖಾಫಿ, ಮುಅದ್ದಿಂ ಮೂಸಾ ಮುಸ್ಲಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಎಂ.ಸಿದ್ದಿಕ್ ಫೈಝಿ ಸ್ವಾಗತಿಸಿ, ಕಾರ್ಯದರ್ಶಿ ಸಿರಾಜುದ್ದೀನ್ ಬಡ್ಡಮೆ ವಂದಿಸಿದರು. ಕೆ. ರಫೀಕ್ ಆತೂರು ಕಾರ್ಯಕ್ರಮ ನಿರೂಪಿಸಿದರು.